Slide
Slide
Slide
previous arrow
next arrow

ಸೇವಾ ಮನೋಭಾವದಿಂದ ಉತ್ತಮ ಸೇವೆ ಸಲ್ಲಿಸಿ : ಈಶ್ವರ ಕಾಂದೂ

300x250 AD

ಕಾರವಾರ: ಸರ್ಕಾರದಿಂದ ನೂತನವಾಗಿ ನಿಯೋಜನೆಗೊಂಡಿರುವ AEs/JEs ಅಧಿಕಾರಿಗಳು ಸೇವಾ ಮನೋಭಾವದಿಂದ ಮತ್ತು ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುವಂತಾಗಬೇಕು ಎಂದು ಜಿಲ್ಲೆಗೆ ನೂತನವಾಗಿ ಆಯ್ಕೆಯಾಗಿರುವ ಎಂಜಿನಿಯರ್‌ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತಿಳಿಸಿದರು.

ಅವರು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು & ನೈರ್ಮಲ್ಯ ವಿಭಾಗ ಕಾರವಾರ ಹಾಗೂ ಉಪ ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ ಸಹಾಯಕ/ಕಿರಿಯ ಇಂಜಿನೀಯರ ರವರಿಗೆ ಹಮ್ಮಿಕೊಂಡ ಜೆ.ಜೆ.ಎಂ ಯೋಜನೆಯಡಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಯೋಜನೆಗಳ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ, ಸ್ವತಃ ಸ್ಥಳ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಪರಿಸ್ಥಿತಿಗಳನ್ನು ಜನರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಕಾರ್ಯನಿರ್ವಾಹಕ ಅಭಿಯಂತರಾದ ರಾಜೀವ್ ಪಿ ನಾಯಕ ಅವರು ಕ್ಷೇತ್ರ ಭೇಟಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಸಹಾಯಕ ಇಂಜಿನಿಯರ್ (ಮುಂಡಗೋಡ) ಪ್ರದೀಪ್ ಭಟ್ ಅವರು ತಾಂತ್ರಿಕ ವಿಭಾಗಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು ಮತ್ತು ನುರಿತ ಸಂಪನ್ಮೂಲ ವ್ಯಕ್ತಿ & ತರಬೇತುದಾರ ಜೋಸೆಪ್ ಜಿ.ಎಮ್.ರೆಬೆಲ್ಲೋ ಅವರು ಜಲ ಸಂಪನ್ಮೂಲ & ಜಲ ಕ್ಷಾಮ, ನೀರಿನ ಶುದ್ಧತೆ & ನೀರಿನ ಮಲಿನತೆ, ನೀರಿನ ದುರ್ಬಳಕೆ ಮತ್ತು ಸದ್ಬಳಕೆ. ಬಾವಿ, ಕೆರೆ, ನದಿ ಮತ್ತು ಕೊಳವೆ ಬಾವಿ, ನೀರಿನ ವ್ಯತ್ಯಾಸ. ಜಲ ಸಂರಕ್ಷಣಾ ವಿಧಾನಗಳು ಮತ್ತು ಪ್ರಾಮುಖ್ಯತೆ ಬೂದು ನೀರು ಮತ್ತು ಕಪ್ಪು ನೀರು ಸಮಸ್ಯೆ ಮತ್ತು ಪರಿಹಾರ. ಮಳೆ ನೀರುಕೊಯ್ದು ವೈಜ್ಞಾನಿಕ ರಚನೆ ಮತ್ತು ನಿರ್ವಹಣೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಅಭಿವೃದ್ಧಿ ಶಾಖೆಯ ಉಪಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ ಹಾಗೂ ಯೋಜನಾ ನಿರ್ದೇಶಕ ಖರೀಮ್ ಹಸದಿ,ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ ಹಾಗೂ ತಾಲ್ಲೂಕು ಮಟ್ಟದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಮಟ್ಟದ ಎಎಒ & Sಃಒ ಕಾರ್ಯಕ್ರಮ ವ್ಯವಸ್ಥಾಪಕರು, ಸಮಾಲೋಚಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top