Slide
Slide
Slide
previous arrow
next arrow

ಅನುದಾನ ನೀಡುವಲ್ಲಿ ತಾರತಮ್ಯ: ಪ.ಪಂ.ಎದುರು ಧರಣಿ‌ ಕುಳಿತ ವಾರ್ಡ್‌ ಸದಸ್ಯರು

300x250 AD

ಜಾಲಿ ಪ.ಪಂ. ಮೂರು ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯ ಕೊರತೆ: ವ್ಯವಸ್ಥಿತ ಷಡ್ಯಂತ್ರವೆಂದ ಸದಸ್ಯರು

ಭಟ್ಕಳ : ಜಾಲಿ ಪಟ್ಟಣ ಪಂಚಾಯತನ ಮೂರು ವಾರ್ಡ್‌ಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಮೂರು ವಾರ್ಡ್ ಸದಸ್ಯರು ಶನಿವಾರದಂದು ಜಾಲಿ ಪಟ್ಟಣ ಪಂಚಾಯತ ಮುಂಭಾಗದಲ್ಲಿ  ಧರಣಿ ಕುಳಿತುಕೊಂಡು ಬಳಿಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು

 ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ (ವಾರ್ಡ್. 9)ದೇವಿನಗರ,(ವಾರ್ಡ್.2) ಕಾರಗದ್ದೆ,(ವಾರ್ಡ್. 8)ದೊಡ್ಮನೆ ಭಾಗದ ಸದಸ್ಯರಾಗಿದ್ದು ನಮ್ಮ ವಾರ್ಡಿಗೆ ಅನುದಾನ ಒದಗಿಸಲು ತಾರತಮ್ಯ ಮಾಡಿದ್ದಾರೆ. ಮೂರು ವಾರ್ಡಿನಲ್ಲಿ ಕಡು ಬಡವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರೆ ಅಧಿಕವಾಗಿದ್ದು ಮೂಲಭೂತ ಸೌಕರ್ಯಗಳು ಇಲ್ಲದೆ ತೀರ ಹಿಂದುಳಿದಿದೆ.ರಸ್ತೆ,ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಹಳ ಇದ್ದು ಕಡು ಬಡವರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ.ಇತ್ತೀಚಿಗೆ ಬಿಡುಗಡೆಯಾದ ಅನುದಾನ ಹಂಚಿಕೆಯಲ್ಲಿ ಮುಂದುವರಿದ ವಾರ್ಡಿಗೆ ಹಣ ನೀಡಿದ್ದು ನಮ್ಮ ವಾರ್ಡಿಗೆ ತಾರತಮ್ಯ ಆಗಿದೆ.ಊರಿನ ಸಮಸ್ಯೆ ಮನಗೊಂಡು ತಾವುಗಳು ಕೂಡಲೇ ಸ್ಪಂದಿಸುತ್ತಾರೆಂದು ನಂಬಿದ್ದೇವೆ. ನಮ್ಮ  ವಾರ್ಡಿನಲ್ಲಿ ಮುಖ್ಯವಾಗಿ ಅಭಿವೃದ್ಧಿ ಪ್ರಸ್ತಾಪಗಳ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಆರಂಭಿಸಬೇಕಾಗಿವೆ. ಈ ಯೋಜನೆಗಳು ನಮ್ಮ ಗ್ರಾಮದ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ, ಈ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಅನುದಾನವನ್ನು ಅನುಮೋದಿಸುವಂತೆ ವಿನಂತಿಸುತ್ತೇವೆ.

ಈಗಾಗಲೇ 2023 ಹಾಗೂ 2024 ಸಾಲಿನಲ್ಲಿ ಸಾಲು ಸಾಲು ಅನುದಾನಗಳು ಬಿಡುಗಡೆಯಾಗಿದ್ದು ಲಕ್ಷ ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಆದರೆ ಮೇಲೆ ತಿಳಿಸಿದ ಹಾಗೆ ನಮ್ಮ ಮೂರು ವಾರ್ಡನ್ನು ಬಿಟ್ಟು ಉಳಿದ ಎಲ್ಲಾ ವಾರ್ಡಿಗೂ 2023 2024 ಸಾಲಿನಲ್ಲಿ ಬಂದ ಪೂರ್ತಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಸೌಜನ್ಯಕ್ಕೂ ಚುನಾಯಿತ ಸದಸ್ಯರಾದ ನಮ್ಮಗಳನ್ನು ಕರೆದು ಈ ಅನುದಾನ ಹಂಚಿಕೆಯಲ್ಲಿ ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದವಾಗಿದೆ ಜನರಿಂದ ಆಯ್ಕೆ ಆದ ನಾವುಗಳು ಸರ್ಕಾರದಿಂದ ಬಂದ ಅನುದಾನಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿರುತ್ತದೆ ಆದರೆ ಅಧಿಕಾರದಲ್ಲಿರುವ ಈ ವ್ಯವಸ್ಥೆಯಲ್ಲಿ ಬಿಜೆಪಿಯ ಬೆಂಬಲಿತ ಅಭ್ಯರ್ಥಿಗಳೆಂದು ನಮ್ಮನ್ನು ಪರಿಗಣಿಸಿ ಈ ಅನುದಾನದಲ್ಲಿ ತಾರತಮ್ಯ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ.

 2023 ರಲ್ಲಿ ಎಸ್ ಎಫ್ ಸಿ ಅನುದಾನದಲ್ಲಿ ಕೋಟಿ ಹತ್ತಿರ ಅನುದಾನ ಬಂದಿದೆ 2024ರಲ್ಲಿ 15ನೇ ಹಣಕಾಸು ಅನುದಾನದಲ್ಲಿ ಕೋಟಿ ಹತ್ತಿರ ಅಭಿವೃದ್ಧಿ ಕಾಮಗಾರಿಗೆ ಹಣ ಬಂದಿದೆ. ಅಂದಾಜು ಮೊತ್ತ ಎರಡು ಕೋಟಿ ಹೆಚ್ಚು ಅಭಿವೃದ್ದಿ ಕಾಮಗಾರಿಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದು ಯಾವುದೇ ಒಂದು ಕಾಮಗಾರಿ ನಮ್ಮ ಈ ಮೂರು ಮೇಲೆ ತಿಳಿಸಿದ ವಾರ್ಡಿಗೆ ಹಾಕಿರುವುದಿಲ್ಲ.ಇದು ದ್ವೇಷ ಪೂರಿತ ವ್ಯವಸ್ಥಿತ ಷಡ್ಯಂತರ ಎಂದು ನಾವು ಭಾವಿಸಬೇಕಾಗುತ್ತದೆ.

ಇದಕ್ಕೆ ಸಂಬಂಧಿಸಿದ ದಾಖಲೆ ಹಾಗೂ ಮಾಹಿತಿಯನ್ನು ಈ ಮನವಿ ಪತ್ರದ ಜೊತೆಗೆ ನೀಡಲಾಗಿದ್ದು .ಈ ಕೂಡಲೇ ತಾವುಗಳು ಇಲ್ಲಿ ನಡೆದಿರುವ ತಾರತಮ್ಯ ಅನುಧಾನ ಹಂಚಿಕೆ ಹಾಗೂ ಕಾನೂನು ಬಾಹಿರ ಎಂದು ಪರಿಗಣಿಸಿ ಕೂಡಲೇ ಎಲ್ಲ ವಾರ್ಡಿಗೂ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

300x250 AD

ನಂತರ ಸಂಜೆ ವೇಳೆ ತಹಶೀಲ್ದಾರ್ ನಾಗರಾಜ ನಾಯ್ಕಡ್ ಸ್ಥಳಕ್ಕೆ ಭೇಟಿ ನೀಡಿ 3 ಸದಸ್ಯರು ನೀಡಿದ ಮನವಿ ಸ್ವೀಕರಿಸಿದ ಅವರು ನೀವು ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇನೆ. ಈ ಹಿಂದೆ ನೀಡಿದ ಅನುದಾನದಲ್ಲಿ ವ್ಯತ್ಯಾಸ ಇದ್ದಲ್ಲಿ ಅಥವಾ ತಾರತಮ್ಯವಾದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಿಯಾ ಯೋಜನೆಯಲ್ಲಿ ಬದಲಾವಣೆ ಮಾಡುವ ಅಧಿಕಾರ ಮೇಲಾಧಿಕಾರಿಗಳಿಗೆ ಇರುತ್ತದೆ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ದೇವಿ ನಗರ ವಾರ್ಡ್ ನಂ -09  ಸದಸ್ಯ ದಯಾನಂದ ನಾಯ್ಕ ಮಾತನಾಡಿ 2023-24 ಶಾಲಿನಲ್ಲಿ ಜಾಲಿ ಪಟ್ಟಣ ಪಂಚಾಯತಿಗೆ ನಾಲ್ಕು ಬಾರಿ ಅನುದಾನ ಬಂದು ಅದರ ಕ್ರಿಯಾ ಯೋಜನೆ ಕೂಡ ಮಾಡಲಾಗಿದೆ. ಆದರೆ ವಾರ್ಡ್ ನಂಬರ 02, 08, 09ಕ್ಕೆ ಯಾವುದೇ ಅನುದಾನ ನೀಡದೆ ತಾರತಮ್ಯ ಮಾಡಿದ್ದಾರೆ. ಕಳೆದ 2 ವರ್ಷದಲ್ಲಿ  ನಾಲ್ಕು ಬಾರಿ ಅನುದಾನ ಬಂದಿದ್ದು.  2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. 

ಎಸ್.ಎಫ್.ಸಿ ಯಲ್ಲಿ ಎರಡು ಬಾರಿ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಎರಡು ಬಾರಿ ಅನುದಾನ ಬಂದಿದೆ. ಈ ಅನುದಾನದಲ್ಲಿ ಬಿಜೆಪಿ ಬೆಂಬಲಿತ 3 ಸದಸ್ಯರಿಗೆ ಯಾವುದೇ ಅನುದಾನ ನೀಡದೆ ತಾರತಮ್ಯ .ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಬಳಿ ಕೇಳಿಕೊಂಡಾಗ. ಇದು ನಾವು ಮಾಡಿಲ್ಲ ಆಡಳಿತ ಅಧಿಕಾರಿಗಳಾದ ತಹಶೀಲ್ದಾರ್ ಮಾಡಿದ್ದಾರೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಇಂದು ಜಾಲಿ ಪಟ್ಟಣ ಪಂಚಾಯತ ಮುಂಭಾಗದಲ್ಲಿ ಧರಣಿ ಕುಳಿತುಕೊಂಡಿದ್ದು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು  ಹೇಳಿದರು.

ಈ ಸಂದರ್ಭದಲ್ಲಿ ಲೀಲಾವತಿ ಗಜಾನನ ಆಚಾರಿ ಹಾಗಿ ಪದ್ಮಾವತಿ ಸುಬ್ರಾಯ್ ನಾಯ್ಕ ಉಪಸ್ಥಿತರಿದ್ದರು

Share This
300x250 AD
300x250 AD
300x250 AD
Back to top