Slide
Slide
Slide
previous arrow
next arrow

ವಿವಿಧ ಜಾತಿಯ ಉತ್ತಮ ಕಸಿ ಸಸ್ಯಗಳು ರಿಯಾಯಿತಿ ದರದಲ್ಲಿ ಲಭ್ಯ

300x250 AD

ದಾಂಡೇಲಿ: ದಾಂಡೇಲಿ ಸಂಶೋಧನಾ ವಲಯದ ಕೋಗಿಲಬನ್ ನರ್ಸರಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಉತ್ತಮ ಗುಣಮಟ್ಟದ ಆಲ್‌ಪೋನ್ಸಾ ಹಾಗೂ ಮಲ್ಲಿಕಾ ತಳಿಯ ಮಾವು, ರಾಮದುರ್ಗ ತಳಿಯ ನೆಲ್ಲಿ ಹಾಗೂ ಗೋಡಂಬಿ ಜಾತಿಯ ಕಸಿ ಸಸಿಗಳನ್ನು ಬೆಳೆಸಿದ್ದು ಸರ್ಕಾರ ನಿಗದಿಪಡಿಸಿದ ರಿಯಾಯಿತಿ ದರದಲ್ಲಿ ಸಾರ್ವಜನಿಕ ಹಾಗೂ ರೈತರಿಗೆ ವಿತರಣೆಗೆ ಲಭ್ಯವಿದ್ದು, ಸಾರ್ವಜನಿಕರು ಹಾಗೂ ರೈತರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಗಿಡಗಳಿಗಾಗಿ ಸಂಶೋಧನಾ ವಲಯ, ಟಿಂಬರ್ ಡಿಪೋ ದಾಂಡೇಲಿ ಅಥವಾ ಸಂಶೋಧನಾ ವಲಯದ ಕೋಗಿಲಬನ್ ನರ್ಸರಿಗೆ ಭೇಟಿ ನೀಡುವಂತೆ ಸಂಶೋಧನಾ ವಲಯ ದಾಂಡೇಲಿಯ ವಲಯ ಅರಣ್ಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top