ಯಲ್ಲಾಪುರ: ರಾಜ್ಯ ಸಿದ್ಧಿ ಬುಡಕಟ್ಟು ಜನಪರ ಸಂಘ, ತಾಲೂಕ ಆರೋಗ್ಯ ಇಲಾಖೆ, ಚವತ್ತಿ ಆರೋಗ್ಯಕೇಂದ್ರ ಇವರ ಸಹಭಾಗಿತ್ವದಲ್ಲಿ ಉಮ್ಮಚಗಿಯ ಕೋಟೆಮನೆ ಗ್ರಾಮದಲ್ಲಿ ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಆರೋಗ್ಯದ ಮಾಹಿತಿ ಹಾಗೂ ಆರೋಗ್ಯ ತಪಾಸಣೆ ಬುಧವಾರ ನಡೆಯಿತು.ಮೂವತ್ತಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ಔಷಧಿ ನೀಡಲಾಯಿತು.
ಚವತ್ತಿಯ ಪ್ರಾಥಮಿಕ ಆರೋಗ್ಯಕೇಂದ್ರದ ಡಾ.ಸುಷ್ಮಾ ಎಂ. ಹಾಗೂ ಸಿಬ್ಬಂದಿ ವರ್ಗದವರು ರಕ್ತದೊತ್ತಡ ಮಧುಮೇಹ ಹಾಗು ರಕ್ತದ ಗುಂಪು ಹಾಗು ಇನ್ನಿತರೆ ಖಾಯಿಲೆಗಳನ್ನು ತಪಾಸಣೆ ಮಾಡಿದರು. ರಾಜ್ಯಸಿದ್ದಿ ಬುಡಕಟ್ಟು ಜನಪರ ಸಂಘದ ಗೌರವ ಅಧ್ಯಕ್ಷ ಜೋನೆ ಕೋಸ್ತಾ ಸಿದ್ದಿ,ಪ್ರಮುಖರಾದ ಲಕ್ಷ್ಮೀ ಸಿದ್ದಿ ಕೋಟೆಮನೆ, ವಿರೂಪಾಕ್ಷಪ್ಪ ಶಿರೂರ, ಶ್ರೀರಾಮನಾಥ ಸುಬ್ಬಾ ಸಿದ್ದಿ ಭಾಗವಹಿಸಿದ್ದರು.