ಹೊನ್ನಾವರ:- ಇಲ್ಲಿನ ತಾಲೂಕಾ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಮತ್ತು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತನೌಕರರಿಗೆ ಸನ್ಮಾನ ಕಾರ್ಯಕ್ರಮ ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಶೇ.90 ಕ್ಕಿಂತ ಅಧಿಕ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಪಡೆದ ಹೊನ್ನಾವರ ತಾಲೂಕಿನ ಒಕ್ಕಲಿಗ ಸಮಾಜದ 34 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಯೋಗ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕುಮಾರ್ ನಿಖಿಲ್ ಗೌಡ, ಕುಮಾರ್ ಮಂಜುನಾಥ ಇವರನ್ನು ಹಾಗೂ ಈ ಸಾಲಿನಲ್ಲಿ ಪಿ.ಡಿ. ಓ ಹುದ್ದೆಯಲ್ಲಿದ್ದು ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಂಜು ಗೌಡ ಮಾವಿನಕುರ್ವ ಮತ್ತು ಲೈಬ್ರರಿಯನ್ ಮಂಜುನಾಥ ಗೌಡ ಹೊಳ್ಳಕುಳಿ ಇವರನ್ನು ಗೌರವಿಸಿ ಸನ್ಮಾನಿಸಿದರು.
ಸಮಾಜದ ಮುಖಂಡರಾದ ಕೃಷ್ಣ ಗೌಡ ಮಾವಿನಕುರ್ವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆದಿಚುಂಚನಗಿರಿ ಶಾಖಾ ಮಠ ಕುಮಟಾದ ಬ್ರಹ್ಮಚಾರಿ ಶ್ರೀಗಳಾದ ಶ್ರೀ ನಿಶ್ಚಲಾನಂದನಾಥರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್. ಸಿ. ಕೆ, ಕೆಳಗಿನೂರು ವಿ. ಎಸ್. ಎಸ್ ಅಧ್ಯಕ್ಷರಾದ ಗಣಪಯ್ಯ ಗೌಡ ಮುಗಳಿ, ಒಕ್ಕಲಿಗರ ಯುವವೇದಿಕೆ ಅಧ್ಯಕ್ಷ ವಾಸು ಗೌಡ ತಲಗೋಡ, ಭೈರವಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶಾಂತಿ ಮಾದೇವ ಗೌಡ ಉಪಸ್ಥಿತರಿದ್ದರು. ಸಂಘದ ಖಜಾಂಚಿ ದಯಾನಂದ ಗೌಡ ಮತ್ತು ನಿರ್ದೇಶಕರಾದ ಲಕ್ಷ್ಮೀಕಾಂತ ಗೌಡ ನಿರ್ವಹಿಸಿದರು.