ಯಲ್ಲಾಪುರ: ತಾಲೂಕಿನ ಉಪಳೇಶ್ವರ ಸಮೀಪದ ದೇಸಾಯಿಮನೆಯಲ್ಲಿ ಶನಿವಾರ ಸಂಜೆ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ವೇ.ಕೃಷ್ಣ ಭಟ್ಟ ಭಟ್ರಕೇರಿ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟಕ ಆರ್.ಎಸ್.ಭಟ್ಟ, ಶ್ರಾವಣ ಮಾಸದಲ್ಲಿ ದೇವತಾರಾಧನೆಗೆ ಮಹತ್ವವಿದೆ. ಕಲಾರಾಧನೆಯೂ ದೇವತಾರಾಧನೆಯ ಪ್ರಮುಖ ಭಾಗವಾಗಿದೆ ಎಂದರು.
ಸ್ಥಳೀಯ ಕಲಾವಿದರಿಂದ ನಳ ಚರಿತ್ರೆ ತಾಳಮದ್ದಲೆ ಪ್ರಸ್ತುತಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಭಾಗ್ವತ ದೇವರಗದ್ದೆ, ನಾಗೇಂದ್ರ ಭಾಗ್ವತ ಶೇಡಿಜಡ್ಡಿ, ಮದ್ದಲೆವಾದಕರಾಗಿ ಸುಬ್ರಾಯ ಭಟ್ಟ ಗಾಣಗದ್ದೆ, ಚಂಡೆವಾದಕರಾಗಿ ಪ್ರಮೋದ ಕಬ್ಬಿನಗದ್ದೆ ಭಾಗವಹಿಸಿದ್ದರು.
ನಳನಾಗಿ ಗಣಪತಿ ಭಾಗ್ವತ ಶಿಂಬಳಗಾರ, ದಮಯಂತಿಯಾಗಿ ಶ್ರೀಧರ ಭಟ್ಟ ಅಣಲಗಾರ, ಋತುಪರ್ಣನಾಗಿ ವಿ.ಟಿ.ಭಟ್ಟ ಸೂಳಗಾರ, ಭೀಮಕನಾಗಿ ರವೀಂದ್ರ ಭಟ್ಟ ವೈದಿಕರಮನೆ, ಚೈದ್ಯ ರಾಣಿಯಾಗಿ ಗಣಪತಿ ಭಾಗ್ವತ ದೇವರಗದ್ದೆ, ಸುದೇವ ಬ್ರಾಹ್ಮಣನಾಗಿ ಜಿ.ಎಸ್.ಭಟ್ಟ ತಟ್ಟಿಗದ್ದೆ ಪಾತ್ರ ನಿರ್ವಹಿಸಿದರು.