Slide
Slide
Slide
previous arrow
next arrow

ಇಂದಿರಾ ಕ್ಯಾಂಟೀನ್‌ಗೆ ಪ.ಪಂ.ಅಧ್ಯಕ್ಷೆ ದಿಢೀರ್ ಭೇಟಿ: ಪರಿಶೀಲನೆ

300x250 AD

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆ ಪಕ್ಕ ಇರುವ ಇಂದಿರಾ ಕ್ಯಾಂಟಿನ್ ಮೇಲ್ಚಾವಣಿಯು ಕಾಮಗಾರಿ ಕಳಪೆ ಆಗಿರುವ ಬಗೆಗೆ ಕೆಲ ದಿನಗಳಿಂದ ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿರುವ ಕುರಿತು ಮಾಹಿತಿ ಪಡೆದ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಗುರುವಾರ ಧಿಡಿರ್ ಭೇಟಿ ನೀಡಿ ಪರಿಶೀಲಿಸಿದರು.

ಭೇಟಿಯ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಶಾಲಾ ಮಕ್ಕಳ ಬಳಿ ಊಟದ ರುಚಿಯ ಕುರಿತು ವಿಚಾರಿಸಿ ಅಡುಗೆ ಕೋಣೆಗೆ ಭೇಟಿ ನೀಡಿ ಅಲ್ಲಿನ‌ ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದರು. ಇಂದಿರಾ ಕ್ಯಾಂಟಿನ್‌ನಲ್ಲಿ ನೂರಾರು ಜನ ಬಂದು ಊಟ ಮಾಡುತ್ತಿದ್ದು ಇಲ್ಲಿ ಗ್ರೈಂಡರ್, ಫ್ರಿಡ್ಜ್ ,ಗ್ಯಾಸ್ ಓಲೆ, ಫಿಲ್ಟರ್‌ಗಳು ಹಾಳಾಗಿರುವದನ್ನೂ ವೀಕ್ಷಿಸಿ ಲಕ್ಷಾಂತರ ಮೌಲ್ಯದ ಪಾತ್ರೆಗಳು ಒಳಗಡೆ ಇದ್ದರೂ, ಬಾಗಿಲೇ ಮುರಿದು ಬಿದ್ದ ಸ್ಥಿತಿಯನ್ನೂ ವಿಕ್ಷಿಸಿ ಮೂಲಸೌಕರ್ಯಗಳನ್ನು ತಕ್ಷಣ ಪಟ್ಟಣ ಪಂಚಾಯತ ನಿಧಿಯಿಂದ ಸರಿಪಡಿಸುವಂತೆ ಸೂಚಿಸಿದರು.

300x250 AD

ಪಟ್ಟಣ ಪಂಚಾಯತ ನಿಧಿಯಿಂದ ನಿರ್ಮಿಸಿದ 6 ಲಕ್ಷ ಮೌಲ್ಯದ ಮೇಲ್ಚಾವಣಿ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಿರುವದನ್ನೂ ವೀಕ್ಷಿಸಿದರು. ಇಂದಿರಾ ಕ್ಯಾಂಟಿನ್‌ನ ಕಟ್ಟಡದ ಸಮಾನಂತರವಾಗಿ ಮೆಲ್ಚಾವಣೆ ನಿರ್ಮಿಸಿದ್ದು 8 ಅಡಿ ಎತ್ತರದಲ್ಲಿ ನಿರ್ಮಿಸಿದ್ದು ಮಳೆ ನೀರು ಸಂಪೂರ್ಣ ಒಳಗೆ ಬರುವಂತೆ ನಿರ್ಮಿಸಿದ್ದಲ್ಲದೆ ಹೊರಭಾಗದಲ್ಲಿ ಇರುವ ಟೇಬಲ್‌ಗಳಿಗೆ ಯಾವುದೇ ರೀತಿಯ ಉಪಯೋಗ ವಾಗದನ್ನು ವೀಕ್ಷಿಸಿದ ನರ್ಮದಾ ನಾಯ್ಕ ಗುತ್ತಿಗೆದಾರರಿಗೆ ನೀಡಿದ ವರ್ಕ ಆರ್ಡರ್ ಹಾಗೂ ಎಸ್ಟಿಮೇಟ್ ನೋಡಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಲ್ಲದೆ ಗುತ್ತಿಗೆ ದಾರರಿಗೆ ಬಿಲ್ ಮಾಡದಂತೆ ಮುಖ್ಯಾಧಿಕಾರಿ ಸುನಿಲ್ ಗಾವಡೆ ಅವರಿಗೆ ಸೂಚಿಸಿದರು. ಪಪಂ ಸದಸ್ಯರಾದ ಸತೀಶ ನಾಯ್ಕ,ರಾಜು ನಾಯ್ಕ ಇದ್ದರು.

Share This
300x250 AD
300x250 AD
300x250 AD
Back to top