ಸಿದ್ದಾಪುರ: ತಾಲೂಕಿನ ಭುವನಗಿರಿ ಭುವನೇಶ್ವರೀ ದೇವಾಲಯದ ಸಭಾಂಗಣದಲ್ಲಿ ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಇವರಿಂದ ಭುವನೇಶ್ವರಿ ದೇವಾಲಯ ಭುವನಗಿರಿ ಹಾಗೂ ಸಾಗರದ ಶ್ರೀ ಸದ್ಗುರು ಶಾಸ್ತ್ರೀಯ ಸಂಗೀತ ವಿದ್ಯಾಲಯ ಇವರ ಸಹಕಾರದೊಂದಿಗೆ ಭಜಭುವನೇಶ್ವರೀ-2 ಅಖಂಡ ಭಜನಾ ಸೇವೆ ಆ.24ರಂದು ಸಂಜೆ 6ರಿಂದ ಆ.25 ಸಂಜೆ 6ವರೆಗೆ ನಿರಂತರ ಭಜನೆ ಜರುಗಲಿದೆ.
ಆ.24ರ ಸಂಜೆ 6ಕ್ಕೆ ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ, ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ದೇವಾಲಯದ ಪ್ರಧಾನ ಅರ್ಚಕ ಶ್ರೀಧರ ಭಟ್ಟ ಮುತ್ತಿಗೆ ಹಾಗೂ ಆಗಮಿಸಿದ ಸಮಸ್ತ ಭಜಕರಿಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಪಾಲ್ಗೊಳ್ಳುವ ಕಲಾವಿದರು: ಶ್ರೀಪಾದ ಹೆಗಡೆ ಸೋಮನಮನೆ, ಸುವರ್ಣ ಹೆಗಡೆ ಎಮ್ಮೆನೊಂಡ, ಮಲ್ಲಿಕಾರ್ಜುನ ಭಜನಾ ಮಂಡಳಿ ಬಾಳೂರು, ಸಿಂಧು ಆದರ್ಶ ಗಾಡಿಗೆರೆ ಬೆಂಗಳೂರು, ವಸುಧಾ ಶರ್ಮಾ ಹಳೆಇಕ್ಕೇರಿ ಹಾಗೂ ಸಂಗಡಿಗರು, ಸತೀಶ ಹೆಗಡೆ ಯಾಣ, ರಾಮಾಂಜನೇಯ ಭಜನಾ ಮಂಡಳಿ ಹೊಸಳ್ಳಿ, ಸಂಜಯ ಭಟ್ಟ ಬಿಳಗಿ, ಸುಧೀರ್ ಬೇಂಗ್ರೆ ಸಿದ್ದಾಪುರ, ರಾಜೇಶ್ವರಿ ಭಟ್ಟ ಡೊಂಬೆಕೈ, ಶ್ರೀನಿಧಿ ಭಟ್ಟ ಮಘೇಗಾರು, ಜಯರಾಮ ಭಟ್ಟ ಹೆಗ್ಗಾರಳ್ಳಿ, ಮಾರುತಿ ಭಜನಾ ಮಂಡಳಿ ಬಿಳಗಿ, ಸ್ವರಗಂಗಾ, ಮನು ಹೆಗಡೆ ಪುಟ್ಟನಮನೆ, ಡಾ.ಸಮೀರ್ ಭಾದ್ರಿ ಸಿದ್ದಾಪುರ, ಅಪೂರ್ವ ಹೆಗಡೆ ಸಿರಸಿ, ವಿನಾಯಕ ಹೆಗಡೆ ಹಿರೇಹದ್ದ ಮತ್ತು ಶಿಷ್ಯರು, ಪ್ರತಿಭಾ ಹೆಗಡೆ ಗಡಿಕೈ ಬೆಂಗಳೂರು, ಡಾ.ಯುವರಾಜ ಮತ್ತು ಡಾ.ಮಂಜುಳಾ ಯುವರಾಜ ಹೊನ್ನಾವರ, ಓಂ ಶಾಂತಿ ಭಜನಾ ಮಂಡಳಿ ಸಿದ್ದಾಪುರ, ಸ್ಮೀತಾ ಹೆಗಡೆ ಕುಂಟೆಮನೆ,ಡಾ.ಅಶೋಕ ಹುಗ್ಗಣ್ಣವರ ಹುಬ್ಬಳ್ಳಿ, ರೇಖಾ ಹೆಗಡೆ ದಾರವಾಡ, ಸುಪ್ರಿಯಾ ಹೆಗಡೆ ಹಿತ್ಲಳ್ಳಿ, ಮಹೇಶ ಕುಲಕರ್ಣಿ ಮುಂಬೈ, ವಿನಾಯಕ ಲಲಿತ್ ಮುಂಬೈ, ಗಜಾನನ ಪಾಟೀಲ್ ಮುಂಬೈ, ತನುಶ್ರೀ ಜೋಗ್ ಮಂಬೈ, ಪ್ರಕಾಶ ಹೆಗಡೆ ಕಲ್ಲಾರೆಮನೆ, ಪ್ರಕಾಶ ಹೆಗಡೆ ಯಡಳ್ಳಿ, ಅಜಯ ಹೆಗಡೆ ವರ್ಗಾಸರ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಸತೀಶ ಹೆಗಡೆ ಯಾಣ, ಸೋಮದತ್ತ ಮಾನೆ ಮುಂಬೈ, ನರಸಿಂಹಮೂರ್ತಿ ಹಳೆಇಕ್ಕೇರಿ, ಅನಂತ ಭಟ್ಟ ಹೆಗ್ಗಾರಳ್ಳಿ, ವಿನಾಯಕ ನಾಯಕ ಮುಂಬೈ, ಅಲ್ಲಮ ಪ್ರಭು ಆಡುಕಳ, ನಿತಿನ್ ಹೆಗಡೆ ಕಲಗದ್ದೆ, ಮಹೇಶ ಹೆಗಡೆ ಹೊಸಗದ್ದೆ, ಮಂಜುನಾಥ ಮೋಟಿನಸರ, ಕೆ.ಪಿ.ಹೆಗಡೆ, ಅನಂತಮೂರ್ತಿ ಭಟ್ಟ ಮತ್ತಿಘಟ್ಟ ಮತ್ತಿತರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕ ನಾರಾಯಣ ಹೆಗಡೆ ಕಲ್ಲಾರೆಮನೆ ತಿಳಿಸಿದ್ದಾರೆ.