ದಾಂಡೇಲಿ : ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನವಗ್ರಾಮದಲ್ಲಿ ಕಳೆದ 2014ರಲ್ಲಿ ಒಟ್ಟು 714 ಆಶ್ರಯ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಕಳೆದ 20 ವರ್ಷಗಳ ಹಿಂದೆ ಈ ಆಶ್ರಯ ಮನೆಗಳ ವಿತರಣೆ ಕಾರ್ಯ ಮಾಡಲಾಗಿದ್ದರೂ, ಈವರೆಗೆ ಈ ಮನೆಗಳಲ್ಲಿ ವಾಸ್ತವ್ಯ ಇರುವವರ ಹೆಸರಿಗೆ ಈ ಆಶ್ರಯ ಮನೆಗಳು ನೋಂದಣಿ ಆಗದೇ ಇರುವುದರಿಂದ, ಹಂಚಿಕೆ ಮಾಡಲಾದ ಆಶ್ರಯ ಮನೆಗಳ ಮಾಲಿಕತ್ವವನ್ನು ಆಯಾಯ ಮನೆಗಳವರಿಗೆ ಮಾಡಿಕೊಡಲು ಅಂಬೇವಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಅಗತ್ಯ ಹಾಗೂ ಅತಿ ತುರ್ತು ಕ್ರಮವನ್ನು ಕೈಗೊಳ್ಳಬೇಕೆಂದು ಅಂಬೇವಾಡಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಬಸವರಾಜ ಹುಂಡೆಕರ್ ಗುರುವಾರ ನಗರದಲ್ಲಿ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.