ಶಿರಸಿ: ಶ್ರೀ ಕೃಷ್ಣ ಗಾನಾಮೃತ ಕಾರ್ಯಕ್ರಮ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.26,ಸೋಮವಾರ ಸಂಜೆ 5:00 ಗಂಟೆಯಿಂದ ಶಿರಸಿಯ ರಾಘವೇಂದ್ರ ಮಠದ ಸಭಾಂಗಣದಲ್ಲಿ ಜರುಗಲಿದೆ. ಜನನಿ ಸಂಸ್ಥೆಯು ಕಳೆದ 18 ವರ್ಷಗಳಿಂದ ಪ್ರತಿವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ‘ಶ್ರೀ ಕೃಷ್ಣ ಗಾನಾಮೃತ’ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾ ಬಂದಿದೆ. ಈ ವರ್ಷವೂ ಕೂಡ ಸಂಸ್ಥೆಯ ಹಿರಿಯ ಹಾಗೂ ಕಿರಿಯ ಕಲಾವಿದರುಗಳಿಂದ ಮತ್ತು ರೇಖಾದಿನೇಶ್ ರವರ ಗಾಯನವನ್ನು ಹಮ್ಮಿಕೊಂಡಿದೆ.
ಹಾರ್ಮೋನಿಯಂನಲ್ಲಿ ಸತೀಶ್ ಭಟ್ ಹೆಗ್ಗಾರ್ ಹಾಗೂ ತಬಲಾದಲ್ಲಿ ಗಣೇಶ್ ಗುಂಡ್ಕಲ್ ಮತ್ತು ರಾಮದಾಸ್ ಭಟ್ ಹಾಗೂ ತಬಲಾ ಮತ್ತು ರೀಧಮ್ ಪ್ಯಾಡ್ ನಲ್ಲಿ ಕಿರಣ್ ಹೆಗಡೆ ಕಾನ್ಗೋಡ್ ಪಾಲ್ಗೊಳ್ಳಲಿದ್ದಾರೆ. ರಾಘವೇಂದ್ರ ಮಠದ ಸಮಿತಿಯ ಅಧ್ಯಕ್ಷರಾದ ಡಿ. ಡಿ. ಮಾಡಗೇರಿ ಅವರು ಹಾಗೂ ಮುಖ್ಯ ಅರ್ಚಕರಾದ ಸುಬ್ಬಣ್ಣ ಆಚಾರ್ಯ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂಬುದಾಗಿ ರಾಘವೇಂದ್ರ ಸೇವಾ ಸಮಿತಿ ಹಾಗೂ ಜನನಿ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.26ಕ್ಕೆ ಶ್ರೀ ಕೃಷ್ಣ ಗಾನಾಮೃತ
