Slide
Slide
Slide
previous arrow
next arrow

ಯಶಸ್ವಿಯಾದ ಚಿಟ್ಟಾಣಿ ‘ಯಕ್ಷ ಮುಂಗಾರು:ಹೃದಯಸ್ಪರ್ಶಿ ಸನ್ಮಾನ; ಯಕ್ಷಗಾನ ಪ್ರದರ್ಶನ

300x250 AD

ಶಿರಸಿ: ಇಲ್ಲಿಯ ರಂಗಧಾಮದಲ್ಲಿ ಪದ್ಮಶ್ರೀ ಚಿಟ್ಟಾಣಿಯವರ ಪುತ್ರ ನರಸಿಂಹ ಚಿಟ್ಟಾಣಿ ಹಾಗೂ ಅಭಿಮಾನಿ ಬಳಗದವರು ಸೇರಿ ಆಯೋಜಿಸಿದ್ದ `ಚಿಟ್ಟಾಣಿ ಚಿಗುರು ಯಕ್ಷ ಮುಂಗಾರು’ ಕಾರ್ಯಕ್ರಮ ಹೃದಯಸ್ಪರ್ಶಿ ಸನ್ಮಾನ ಮತ್ತು ಯಕ್ಷಗಾನ ಪಾರಿಜಾತ-ನರಕಾಸುರ ವಧೆಗಳು ಅತ್ಯಂತ ಸಂಭ್ರಮದಿಂದ ನಡೆದು ಯಕ್ಷ ಕಲಾಭಿಮಾನಿಗಳಿಗೆ ಕಲಾ ರಸದೂಟ ನೀಡುವಲ್ಲಿ ಯಶಸ್ವಿಯಾಗಿದೆ.

ಆರಂಭಿಕವಾಗಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿ ಸಾಧನೆ ಗೈದ ಖ್ಯಾತ ಮದ್ದಲೆವಾದಕ ರಾಮಚಂದ್ರ ಹೆಗಡೆ ಹುಲಿಮನೆ ಯಲ್ಲಾಪುರ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶ್ರೀಕ್ಷೇತ್ರ ಸಿಗಂಧೂರಿನ ಪ್ರಧಾನ ಅರ್ಚಕ ವಿ. ಶೇಷಗಿರಿ ಭಟ್ಟ ಮಾತನಾಡಿ ಕಲಾ ಮಾತೆಯನ್ನು ಆರಾಽಸುವುದು, ಅಭ್ಯಸಿಸುವುದು, ಹಾಗೇ ಸಾಧನೆಗೈಯುವುದು ಸುಲಭವಾದದ್ದಲ್ಲ. ಇದರಲ್ಲಿ ನಿಷ್ಠೆ, ಪ್ರಾಮಾಣಿಕತೆ, ಆಸಕ್ತಿ ಪ್ರಮುಖವಾದದ್ದು. ಅದಿದ್ದರೆ ಜನಮಾನಸದಲ್ಲಿ ಅಚ್ಚೊತ್ತಿ ಉಳಿಯುವ ಕಲಾವಿದರಾಗಬಹುದು ಎಂಬುದನ್ನು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಸಾಕ್ಷೀಕರಿಸಿದ್ದಾರೆ. ಇಂದು ಅವರ ಇಡೀ ಕುಟುಂಬ ನವರಸಕಲೆ ತುಂಬಿದ ಯಕ್ಷಗಾನದಲ್ಲಿ ಆ ಕಲಾರಾಧನೆಯನ್ನು ಮುಂದುವರೆಸುತ್ತ ಕಲಾಭಿಮಾನಿಗಳ ಹೃದಯದಲ್ಲಿ ನೆಲೆ ನಿಂತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಸನ್ಮಾನ ನೆರವೇರಿಸಿದ ಸಿದ್ದಾಪುರ ಟಿ.ಎಂ.ಎಸ್.ನ ಅಧ್ಯಕ್ಷ ಆರ್. ಎಮ್.ಹೆಗಡೆ ಬಾಳೇಸರ ಹಾಗೂ ವಿಶ್ವಂಭರ ವಾರಪತ್ರಿಕೆ ಸಂಸ್ಥಾಪಕ ಅನಂತಮೂರ್ತಿ ಹೆಗಡೆ, ಹಾಗೂ ಉ.ಕ ಜಿಲ್ಲಾ ಪಂಚಾಯತದ ಮಾಜಿ ಅಧ್ಯಕ್ಷ ಆರ್.ಎಸ್.ರಾಯ್ಕರ ಉಪ್ಪೋಣಿ ಮತ್ತು ಭಾಗವತ ಹಿಲ್ಲೂರು ರಾಮಕೃಷ್ಣ ಹೆಗಡೆ ಮಾತನಾಡಿ ಪದ್ಮಶ್ರೀ ಚಿಟ್ಟಾಣಿಯವರ ಹಾಗೂ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಯಕ್ಷಗಾನ ಕ್ಷೇತ್ರಕ್ಕೆ ನೀಡತ್ತಿರುವ ಅಮೋಘಸೇವೆ, ಕೆಲಸ ಕಾರ್ಯಗಳನ್ನು ಶ್ಲಾöಸುತ್ತ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿದ ರಾಮಚಂದ್ರ ಹೆಗಡೆ ಹುಲಿಮನೆಯವರ ಪರವಾಗಿ ಪುರೋಹಿತರಾದ ಶರ್ಮಾ ಭಟ್ಟ ಹಿತ್ಲಳ್ಳಿ ಮಾತನಾಡಿ ಜೀವನದಲ್ಲಿ ಎದುರಿಸಿದ ಕಷ್ಟ-ನಷ್ಟಗಳನ್ನು ವಿವರಿಸುತ್ತ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಕಣಕಾರ ಡಾ. ಜಿ. ಎ. ಹೆಗಡೆ ಸೋಂದಾ ಮಾತನಾಡಿ ಚಿಟ್ಟಾಣಿ ಎಂಬ ಹೆಸರು ಕೇಳಿದ ತಕ್ಷಣ ನೆನಪಾಗುವುದೇ ಯಕ್ಷಗಾನ, ಆ ಕಲೆಯ ಮಹತ್ವ, ಅದರ ಆಳ,ಉದ್ದಗಲಗಳನ್ನು ಅಭ್ಯಸಿಸುತ್ತ, ಆ ಕ್ಷೇತ್ರದಲ್ಲಿ ಅಮೋಘ ಕೊಡುಗೆ ನೀಡಿದ ಚಿಟ್ಟಾಣಿ ಕುಟುಂಬ ನಿಜಕ್ಕೂ ಅಭಿನಂದನೀಯವಾದದ್ದು.ಹಿರಿಯ ವ್ಯಕ್ತಿ ರಾಮಚಂದ್ರ ಹೆಗಡೆಯವರಾಗಲೀ ಅಥವಾ ಅವರ ಮಕ್ಕಳು, ಮೊಮ್ಮಕ್ಕಳ ಕೊಡುಗೆಯಾಗಲಿ, ಯಕ್ಷಗಾನ ಕ್ಷೇತ್ರವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಮುನ್ನಡೆಸುತ್ತಿರುವುದು, ಹಾಗೂ ಹಂತಹಂತವಾಗಿ ಕಲಾಸಾಧನೆಯ ವ್ಯಕ್ತಿ ಗುರುತಿಸಿ ಸನ್ಮಾನಿಸುವ ಮಕ್ಕಳ ಕಾರ್ಯವೈಖರಿ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ತಹಶೀಲ್ದಾರ್ ಅಶೋಕ್ ಭಟ್ಟ ಮತ್ತು ಚಿಟ್ಟಾಣಿ ಕುಟುಂಬದ ಒಡನಾಡಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲಾಸಾಧನೆ ಹಾಗೂ ಯಕ್ಷಗಾನ ಸಂಘಟನೆಗಾಗಿ ಪದ್ಮಶ್ರೀ ಚಿಟ್ಟಾಣಿಯವರ ಪುತ್ರ ನರಸಿಂಹ ಚಿಟ್ಟಾಣಿ ದಂಪತಿಯನ್ನು ಹಿತ್ಲಳ್ಳಿ ಶರ್ಮಾ ಭಟ್ಟ, ಜಿ.ಎ. ಹೆಗಡೆ ಸೋಂದಾ ಮತ್ತು ಅನಂತಮೂರ್ತಿ ಹೆಗಡೆ ಶಾಲು, ಸನ್ಮಾನಪತ್ರ ಸ್ಮರಣಿಕೆಯೊಂದಿಗೆ ಗೌರವಿಸಿದರು.
ಪ್ರಾಸ್ತಾವಿಕ ಮಾತನಾಡಿದ ನರಸಿಂಹ ಚಿಟ್ಟಾಣಿ ತಮ್ಮ 35 ವರ್ಷದ ಸುದೀರ್ಘ ಯಕ್ಷ ಪಯಣದಲ್ಲಿ ಸಹಾಯ ಸಹಕಾರ ನೀಡಿದವರನ್ನು ಸ್ಮರಿಸುತ್ತ ಸುಸಂಸ್ಕೃತವಾದ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಸಮಾಜದ ಕಲಾಭಿಮಾನಿಗಳು ಹಾಗೂ ಸಂಘ 8ಸಂಸ್ಥೆ ಮೇಲಿದೆ ಎಂದರು. ಮಹೇಶ ಭಟ್ಟ ಕಡೆಮನೆ ಸನ್ಮಾನ ಪತ್ರ ವಾಚಿಸಿದರೆ, ಗಿರಿಧರ ಕಬ್ನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಂತರದಲ್ಲಿ `ಪಾರಿಜಾತ-ನರಕಾಸುರ ವಧೆ’ ಪ್ರಸಂಗ ಸುಂದರವಾಗಿ ಪ್ರದರ್ಶಿಸಲ್ಪಟ್ಟು, ಇತ್ತೀಚೆಗೆ ನಡೆದ ಯಕ್ಷಗಾನ ಪ್ರಸಂಗದಲ್ಲಿ ಬಹಳ ಚೆನ್ನಾಗಿ ನಡೆದ ಯಕ್ಷಗಾನ ಎಂಬ ಮಾತು ಪ್ರೇಕ್ಷಕ ಗ್ಯಾಲರಿಯಿಂದ ಕೇಳಿ ಬಂತು.
ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಕಾಂತ ರಾವ್ ಮೂಡಬಿಳ್ಳೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ,ಮದ್ದಲೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆಯಲ್ಲಿ ಶಿವಾನಂದ ಕೋಟ ಪಾಲ್ಗೊಂಡರು.
ಮುಮ್ಮೇಳದ ಪಾತ್ರಧಾರಿಗಳಾಗಿ ನರಸಿಂಹ ಚಿಟ್ಟಾಣಿ, ಉದಯ ಕಡಬಾಳ, ಕಾರ್ತಿಕ ಚಿಟ್ಟಾಣಿ, ಸುಽÃರ ಉಪ್ಪೂರ್, ಷಣ್ಮುಖ ಗೌಡ ಬಿಳೇಗೋಡು, ಪ್ರಣವ ಭಟ್ಟ ಸಿದ್ದಾಪುರ, ಗುರು ಭಟ್ಟ ಮಾಡಗೇರಿ, ಹಾಗೂ ಹಾಸ್ಯ ಪಾತ್ರದಲ್ಲಿ ಕ್ಯಾದಗಿ ಮಹಾಬಲೇಶ್ವರ ಭಟ್ಟ ಭಾಗವಹಿಸಿ ಪಾತ್ರಕ್ಕೆ ಜೀವ ತುಂಬಿದರು.

300x250 AD

Share This
300x250 AD
300x250 AD
300x250 AD
Back to top