Slide
Slide
Slide
previous arrow
next arrow

ಸದೃಢ ಹೃದಯಕ್ಕಾಗಿ ಪ್ರತಿದಿನ ಧ್ಯಾನ, ವ್ಯಾಯಾಮ ಅತ್ಯವಶ್ಯ: ಡಾ.ಜಿ.ವಿ.ಭಟ್

300x250 AD

ದಾಂಡೇಲಿಯಲ್ಲಿ ಉಚಿತ ಹೃದಯರೋಗ ತಪಾಸಣಾ ಶಿಬಿರ ಯಶಸ್ವಿ

ದಾಂಡೇಲಿ : ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಾ.ಭಟ್ ಆಸ್ಪತ್ರೆ ದಾಂಡೇಲಿ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಡಿ ನಗರದ ಕರ್ನಾಟಕ ಸಂಘದ ಪಂಚಗಾನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣಾ ಶಿಬಿರವು ಭಾನುವಾರ ಸಂಜೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ನಗರದ ಹಿರಿಯ ಹೃದಯ ರೋಗ ತಜ್ಞರಾದ ಡಾ.ಜಿ.ವಿ.ಭಟ್ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ವೇಗವಾಗಿ ಬದಲಾಗುತ್ತಿರುವ ಈ ತಾಂತ್ರಿಕ ಯುಗದಲ್ಲಿ ಎಲ್ಲರು ಒತ್ತಡದ ಬದುಕು ನಡೆಸುತ್ತಿರುವುದು ಸಾಮಾನ್ಯವಾಗಿದೆ. ಧೂಮಪಾನ, ಮದ್ಯಪಾನ, ಅನುವಂಶೀಯತೆಯಿಂದ ಹೃದಯ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ, ಮಧುಮೇಹ ಕಾಯಿಲೆ ಹೃದಯಕ್ಕೆ ತೊಂದರೆ ಮಾಡುತ್ತವೆ. ಸದೃಢ ಹೃದಯ ಹೊಂದಬೇಕಾದರೆ ಪ್ರತಿದಿನ ವ್ಯಾಯಾಮ ಮಾಡಬೇಕು. ಧ್ಯಾನ ಹಾಗೂ ವಾಕಿಂಗ್‌ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಸಂತೋಷ್ ಚೌಹ್ವಾಣ್ ಅವರು ವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬ ನಾಯಕ ಯಶಸ್ಸಿಗೆ ಆರೋಗ್ಯ ಸಮೃದ್ಧಿ ಬಹಳ ಮುಖ್ಯ. ಉತ್ತಮ ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಈ ಶಿಬಿರ ಸಹಕಾರಿಯಾಗಲಿ ಎಂದರು.

300x250 AD

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರುಗಳಾದ ಡಾ.ಬಸವರಾಜ ಬಾಳಿ, ಡಾ.ಶೃತಿ, ಡಾ.ಪಕೀರಯ್ಯ, ಇದೇ ಆಸ್ಪತ್ರೆಯ ಅಧಿಕಾರಿಗಳಾದ ಕೇಶವ ರಂಗಾಪುರೆ, ಅನುಷಾ, ಪ್ರಭಾವತಿ, ನಗರದ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ರಾಜಿಕಾ, ನೂರ್ ಇಸ್ಲಾಂ ಟ್ರಸ್ಟಿನ ಇಕ್ಬಾಲ್ ಶೇಖ, ಲಯನ್ಸ್ ಕ್ಲಬ್ಬಿನ ವಿಭಾಗಿಯ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳ, ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಡಾ.ನಾಸೀರ್ ಅಹ್ಮದ್ ಜಂಗೂಬಾಯಿ, ಖಜಾಂಚಿ ಆಗಸ್ಟಿನ್ ಕಾಳೆ, ಶಿಬಿರದ ಸಂಯೋಜಕರಾದ ಯು. ಎಸ್.ಪಾಟೀಲ್, ಲಯನ್ಸ್ ಕ್ಲಬಿನ ಪ್ರಮುಖರುಗಳಾದ ವಿ.ಪಿ.ಜೋಶಿ, ಪಿ.ಕೆ.ಜೋಶಿ, ಉದಯ ಶೆಟ್ಟಿ, ಅನಿಲ್ ದಂಡಗಲ್, ಚೇತನ ಕುಮಾರಮಠ, ಇಮ್ತಿಯಾಜ್ ಅತ್ತಾರ, ಮಾರುತಿ ರಾವ್ ಮಾನೆ, ಗಜಾನನ ಹಾಗೂ ಲಯನ್ಸ್ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.

ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರುಗಳು ಶಿಬಿರದಲ್ಲಿ ಭಾಗವಹಿಸಿ ಉಚಿತ ಹೃದಯ ರೋಗ ತಪಾಸಣೆಯನ್ನು ನಡೆಸಿಕೊಟ್ಟರು. ಶಿಬಿರದ ಯಶಸ್ಸಿಗೆ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ 20 ವಿದ್ಯಾರ್ಥಿಗಳು, ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಶಿಬಿರದಲ್ಲಿ ಒಟ್ಟು 305 ಜನ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Share This
300x250 AD
300x250 AD
300x250 AD
Back to top