ದಾಂಡೇಲಿ : ಕಳೆದ ಮೂರ್ನಾಲ್ಕು ತಿಂಗಳಿನಿಂದ ನಗರದ ಲಿಂಕ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಬಿಡಾಡಿ ದನವನ್ನು ಅಂತು ಕೊನೆಗೂ ನಗರ ಸಭೆಯವರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರ ಸೂಚನೆಯಂತೆ ನಗರ ಸಭೆಯ ಆರೋಗ್ಯ ನಿರೀಕ್ಷಕರಾದ ವಿಲಾಸ್ ದೇವಕರ ಅವರ ನೇತೃತ್ವದಲ್ಲಿ ಪೌರಕಾರ್ಮಿಕರ ಮೇಲ್ವಿಚಾರಕ ಶ್ರೀನಿವಾಸರವರನ್ನೊಳಗೊಂಡ ಪೌರಕಾರ್ಮಿಕರ ತಂಡ ಭಾನುವಾರ ಬೆಳಿಗ್ಗೆ ಓಡಾಡಿ ಹಿಡಿದು ನಗರ ಸಭೆಯ ಆವರಣದಲ್ಲಿ ಕಟ್ಟಿ ಹಾಕಿದ್ದಾರೆ. ಅದನ್ನು ದುಸಗಿಯ ಗೋಶಾಲೆಗೆ ಸ್ಥಳಾಂತರಿಸಲು ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ. ಇದೇ ಬಿಡಾಡಿ ದನ ಕೆಲ ತಿಂಗಳ ಹಿಂದೆ ಸಂಡೆ ಮಾರ್ಕೆಟ್ ಹತ್ತಿರ ಓರ್ವನಿಗೆ ಕೋಡಿನಿಂದ ತಿವಿದು ಸಾಯಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ದುಸಗಿಯ ಗೋಶಾಲೆಗೆ ಸೇರ್ಪಡೆ:
ಹರಸಾಹಸ ಪಟ್ಟು ಹಿಡಿದ ಬಿಡಾಡಿ ದನವನ್ನು ಭಾನುವಾರ ಸಂಜೆ ದುಸಗಿಯ ಗೋಶಾಲೆಗೆ ಸೇರಿಸಲಾಗಿದೆ. ನಗರ ಸಭೆಯ ಈ ಕಾರ್ಯದ ಬಗ್ಗೆ ಯುವ ಸಮಾಜ ಸೇವಕರಾದ ದಾಸಪ್ಪ ಬಂಡಿವಡ್ಡರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.