Slide
Slide
Slide
previous arrow
next arrow

ಹಸಿರು ಮತ್ತು ಪರಿಸರ ಜಾಗೃತವಾಗಲಿ: ಬ್ರಹ್ಮಾನಂದ ಸ್ವಾಮೀಜಿ

300x250 AD

ಭಟ್ಕಳ : ಅರಣ್ಯವಾಸಿಗಳಿಂದ ಹಮ್ಮಿಕೊಂಡ ದಶ ಲಕ್ಷ ಗಿಡ ನೆಡುವ ಅಭಿಯಾನದಿಂದ ನಿಸರ್ಗದಲ್ಲಿ ಹಸಿರು ಮತ್ತು ಪರಿಸರ ಜಾಗೃತಕ್ಕೆ ಪೂರಕವಾಗಲಿ. ಈ ದಿಸೆಯಲ್ಲಿ ಕಾರ್ಯಕ್ರಮ ಯಶಸ್ಸಾಗಲಿ ಎಂದು ರಾಮ ಕ್ಷೇತ್ರ ಮಹಾ ಸಂಸ್ಥಾನದ ಗುರುಗಳಾದ ಬ್ರಹ್ಮಾನಂದ ಸ್ವಾಮೀಜಿ ನುಡಿದರು.

ಅವರು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಭಟ್ಕಳ್ ತಾಲೂಕಿನ ಕರಿಕಲ್ ಶಾಖ ಮಠದ ಆವರಣದಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ, ಗಿಡಕ್ಕೆ ನೀರು ಎರೆಯುವದರೊಂದಿಗೆ ಆಶೀರ್ವದಿಸಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ದಶ ಲಕ್ಷ ಗಿಡ ನೆಡುವ ಕಾರ‍್ಯಕ್ರಮದ ಕುರಿತು ಪರಿಸರದೊಂದಿಗೆ ಅರಣ್ಯವಾಸಿಗಳು ಸಹಭಾಗತ್ವದಲ್ಲಿ ಜೀವಿಸುವದೊಂದಿಗೆ ಅರಣ್ಯವಾಸಿಗಳು ಪರಿಸರಕ್ಕೆ ಪೂರಕವಾಗಿ ಜೀವಿಸಬೇಕೆಂಬ ಉದ್ದೇಶದಿಂದ ಗಿಡ ನೆಡುವ ಕಾರ‍್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

300x250 AD

   ಕರ‍್ಯಕ್ರಮದಲ್ಲಿ ವಿವಿಧ ತಾಲೂಕಿನ ಅಧ್ಯಕ್ಷರಾದ ಭೀಮಸಿ ವಾಲ್ಮೀಕಿ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ರಾಜೇಶ ಮಿತ್ರ ನಾಯ್ಕ ಅಂಕೋಲ, ರಾಜು ಹರಿಕಾಂತ ಅಂಕೋಲ, ಪಾಂಡು ನಾಯ್ಕ ಬೆಳಕೆ, ದೇವರಾಜ ಗೋಂಡ, ರಾಮು ಮರಾಠಿ. ವಿನೋದ ನಾಯ್ಕ ಯಲ್ ಕೊಡಗಿ,  ಮಂಜುನಾಥ ಮರಾಠಿ ಭಟ್ಕಳ ಮುಂತಾದ ಕಾರ‍್ಯಕರ್ತರು ಉಪಸ್ಥಿತರಿದ್ದರು.

  ಶ್ಲಾಘನೆ:
ಪರಿಸರ ಪೂರ್ವ ಕಾರ‍್ಯಕ್ರಮವನ್ನು ಹಮ್ಮಿಕೊಂಡ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರಿಗೆ ಅರಣ್ಯವಾಸಿಗಳ ಪರವಾಗಿ ಅಭಿನಂದಿಸಿ ಪರಿಸರ ಜಾಗೃತಿ ಕಾರ‍್ಯ ಕುರಿತು ಸ್ವಾಮೀಜಿಯವರು ಶ್ಲಾಘಿಸಿದರು.

Share This
300x250 AD
300x250 AD
300x250 AD
Back to top