ಕುಮಟಾ: ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದ ಬೆಟ್ಕುಳ್ಳಿಯ ಗುಲ್ಬಾಮ್ (35) ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಜು. 30ರಂದು ಕುಮಟಾದಿಂದ ಅಂಕೋಲಾ ಕಡೆ ಆದಮ್ ಮುಲ್ಲಾ ಓಡಿಸುತ್ತಿದ್ದ ಸ್ಕೂಟಿಯಲ್ಲಿ ಆತನ ಪತ್ನಿ ಗುಲ್ಬಾಮ್ ಹಿಂದೆ ಕೂತಿದ್ದರು. ಬೆಟ್ಕುಳಿ ಗ್ರಾಮದ ಕಮಾನಿನ ಎದುರು ಸ್ಕೂಟಿ ಸ್ಕಿಡ್ ಆಗಿದ್ದರಿಂದ ಇಬ್ಬರಿಗೂ ಗಾಯವಾಗಿತ್ತು. ಗಂಭೀರ ಗಾಯಗೊಂಡ ಗುಲ್ಬಾಮ್’ರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಲ್ಲಿ ಯಾವುದೇ ಚೇತರಿಕೆ ಕಾಣದ ಕಾರಣ ಮಂಗಳೂರಿನ ಎಜೆ ಆಸ್ಪತ್ರೆಗೆ ಸ್ಥಳಾಂತರಿಸುವಾಗ ಅವರು ಸಾವನಪ್ಪಿದ್ದಾರೆ.