Slide
Slide
Slide
previous arrow
next arrow

ಇಂಡಿಯಾ ಸ್ಕೇಟ್ ಗೇಮ್ಸ್‌ನಲ್ಲಿ ಅಕ್ಕ-ತಂಗಿಯರ ಅಪೂರ್ವ ಸಾಧನೆ

300x250 AD

ಶಿರಸಿ: ಇತ್ತೀಚೆಗೆ ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಇಂಡಿಯಾ ಸ್ಕೇಟ್ ಗೇಮ್ಸ್ 2024 ಕ್ರೀಡಾಕೂಟದಲ್ಲಿ ಶಿರಸಿಯ ಕುವರಿಯರು ಅಪೂರ್ವ ಸಾಧನೆ ಗೈದಿದ್ದಾರೆ.

ಕರ್ನಾಟಕ ತಂಡ ಪ್ರತಿನಿಧಿಸಿದ ಕುಮಾರಿ ಅಕ್ಷರಾ ರಮೇಶ್ ಹೆಗಡೆ ಸಬ್ ಜೂನಿಯರ್ ಗರ್ಲ್ಸ್ ರೋಲರ್ ಹಾಕಿ ವಿಭಾಗದಲ್ಲಿ ಚಿನ್ನದ ಪದಕವನ್ನು ಹಾಗೂ ಕುಮಾರಿ ಅನಘಾ ರಮೇಶ್ ಹೆಗಡೆ ಸೀನಿಯರ್ ಗರ್ಲ್ಸ್ ರೋಲರ್ ಡರ್ಬಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅನಘಾ ಪ್ರಸ್ತುತ ಎಂ.ಇ.ಎಸ್. ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯು, ಅಕ್ಷರಾ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಾರೆ. ಇಸಳೂರು ಸಣ್ಣಕೇರಿ ಗ್ರಾಮದ ಅಕ್ಕತಂಗಿಯರು ತರಬೇತುದಾರ ದಿಲೀಪ್ ಹಣಬರ್ ಮಾರ್ಗದರ್ಶನದಲ್ಲಿ ಸ್ಕೇಟಿಂಗ್ ಅಭ್ಯಾಸ ನಡೆಸುತ್ತಿದ್ದು, ಈ ಮುಂಚೆಯೂ ರಾಷ್ಟ್ರ ಮಟ್ಟದ ಹಲವಾರು ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ ಗೆದ್ದಿರುವುದು ಉಲ್ಲೇಖನೀಯ.

300x250 AD
Share This
300x250 AD
300x250 AD
300x250 AD
Back to top