ಯಲ್ಲಾಪುರ: ತಾಲೂಕಿನ ಮಂಚಿಕೇರಿ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಕಾನೂನು ಅರಿವು ಮಾಹಿತಿ ಕಾರ್ಯಗಾರ, ಹಾಗೂ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸಿಪಿಐ ರಮೇಶ ಹಾನಾಪುರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾಫಿಯಾ ಟ್ರಾಫಿಕ್ ರೂಲ್ಸ್ ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿನೀಡಿ, ಆಗುವ ಅನಾಹುತಗಳನ್ನು ತಡೆಯಲು ಕೈಗೊಳ್ಳಬೇಕಾದ ಎಚ್ಚರಿಕೆ ತಿಳಿಸಿದರು. ಹೆಣ್ಣು ಮಕ್ಕಳಿಗೆ ಯಾವುದೇ ತೊಂದರೆಯಾದಲ್ಲಿ, 112 ಇದಕ್ಕೆ ಕರೆ ಮಾಡಿದರೆ, ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ದ ಎಂದರು.
ಶಿಕ್ಷಕ ಸದಾನಂದ ನಾಯಕ ಪ್ರತಿಜ್ಞಾವಿಧಿ ಭೋಧಿಸಿದರು.ಸಂಸ್ಥೆಯ ಅಧ್ಯಕ್ಷ ಗುರುಪ್ರಸಾದ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ,ಗ್ರಾಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್,
ಪ್ರಮುಖರಾದ ಲೋಕೇಶ ಗುನುಗಾ, ಪ್ರದೀಪ್ ನಾಯಕ, ವಿಜಯಲಕ್ಷ್ಮಿ, ವಿದ್ಯಾ ಪಟಗಾರ, ನವೀನ್ ಹೆಗಡೆ, ಸಂತೋಷ ಪಾಯ್ದೆ, ರಾಮಣ್ಣ ಕಬ್ಬಿನಗದ್ದೆ , ಹವಲ್ದಾರ್ ದೀಪಕ್ ನಾಯಕ್ ಭಾಗವಹಿಸಿದ್ದರು.