ಭಟ್ಕಳ: 15 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ ನಾಗರಾಜ ವೆಂಕ್ಟಯ್ಯ ದೇವಡಿಗ ಅವರಿಗೆ ಭಟ್ಕಳದ ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಶಂಸುದ್ದಿನ್ ಸರ್ಕಲ್‌ನಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ಬಳಿಕ ಮಾತನಾಡಿದ ನಿವೃತ್ತ ಯೋಧ ನಾಗರಾಜ ವೆಂಕ್ಟಯ್ಯ ದೇವಡಿಗ ಓರ್ವ ನಿವೃತ್ತ ಮಾಜಿ ಸೈನಿಕನನ್ನು ಈ ರೀತಿಯಾಗಿ ಸ್ವಾಗತ ಕೋರಿರುವುದು ತುಂಬಾ ಸಂತೋಷ ತಂದಿದ್ದು. ಇಂತಹ ಸ್ವಾಗತ ಮುಂದಿನ ಯುವ ಪೀಳಿಗೆಗೆ ದೇಶ ಸೇವೆಗೆ ಹೋಗಲು ಹುರಿದುಂಬಿಸುವಂತಾಗುತ್ತದೆ ಎಂದ ಅವರು ನನಗೆ ಸ್ವಾಗತ ಕೋರಿದ ಎಲ್ಲಾ ಸಮಾಜದ ಮುಖಂಡರಿಗೆ ಹಾಗೂ ಭಟ್ಕಳದ ಜನತೆಗೆ ಧನ್ಯವಾದ ಸಲ್ಲಿಸಿದರು.
ನಂತರ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ ನಾಗರಾಜ ವೆಂಕ್ಟಯ್ಯ ದೇವಾಡಿಗ 2008 ರಲ್ಲಿ ಜುಲೈ ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿ ಮೊದಲು ಬೇಸಿಕ್ ತರಬೇತಿಯನ್ನು ಓಡಿಸಾದ ಚಿಲ್ಕಾದಲ್ಲಿ ಮುಗಿಸಿ ನಂತರ ವೃತಿ ಪರ ತರಬೇತಿಯನ್ನು ಕೊಚ್ಚಿಯಲ್ಲಿ ಮಾಡಿ ದೇಶದ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದ ಅವರು ಐ. ಎನ್.ಎಸ್ ನಲ್ಲಿ ಅವರ ಹೆಚ್ಚಿನ ಸಮಯವನ್ನು ಕಳೆದು ಅದರೊಂದಿಗೆ ವಿವಿಧ ದೇಶಗಲ್ಲಿ ಯುದ್ಧದ ತರಬೇತಿಯನ್ನು ದೇಶಕ್ಕಾಗಿ ದುಡಿದಿದ್ದಾರೆ. ಅದೇ ರೀತಿ ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಯೌವ್ವನದ 15 ವರ್ಷವನ್ನು ಮುಡಿಪಾಗಿಟ್ಟು ಇಂದು ಅವರು ತಮ್ಮ ನಿವೃತ್ತಿಯನ್ನು ಪಡೆದು ತವರಿಗೆ ಬಂದಿರುವುದು ನಮಗೆ ಹೆಮ್ಮೆಯಾಗಿದೆ ಎಂದರು.
ಇದೆ ವೇಳೆ ವಿವಿಧ ಸಮಾಜದ ಮುಖಂಡರು ಬಿಜೆಪಿ ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ,ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಹಿರಿಯ ಮಾಜಿ ನಿವೃತ್ತ ಸೈನಿಕ ಎಂ.ಡಿ.ಪಕ್ಕಿ ಮಾತನಾಡಿದರು.
ಬಳಿಕ ಹೆಬಳೆ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ನಿವೃತ್ತ ಯೋಧರನ್ನು ಭಟ್ಕಳ ಶಂಸುದ್ದಿನ್ ಸರ್ಕಲ್ ನಿಂದ. ತೆರೆದ ಜೀಪ್ ನಲ್ಲಿ ಬೈಕ್ ಮೆರವಣಿಗೆ ಮೂಲಕ ಅವರ ಹೆಬಳೆ ಗ್ರಾಮಕ್ಕೆ ಕರೆದುಕೊಂಡು ಹೋದರು
ಇದಕ್ಕೂ ಪೂರ್ವದಲ್ಲಿ ಕಾರಿನ ಮೂಲಕ ಭಟ್ಕಳ ಶಂಸುದ್ದಿನ್ ಸರ್ಕಲ್ ಗೆ ಆಗಮಿಸಿದ ಯೋಧನ್ನು ಹೂವಿನ ಹಾರ ಹಾಕಿ ಗುಲಾಭಿ ಹೂ ನೀಡಿ ಮೂಲಕ ವಿವಿಧ ಸಂಘ ಸಂಸ್ಥೆ, ಬಿಜೆಪಿ ಮಂಡಲ ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.