Slide
Slide
Slide
previous arrow
next arrow

1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವೆಗೆ ಒಂದು ವರ್ಷದ ಸಂಭ್ರಮ

300x250 AD

ಸಂದೇಶ್ ಎಸ್.ಜೈನ್, ದಾಂಡೇಲಿ

ದಾಂಡೇಲಿ : 1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವೆಯು ಕರ್ನಾಟಕದಾದ್ಯಂತ ಗಮನಾರ್ಹ ಸಾಧನೆಯೊಂದಿಗೆ ಮೊದಲ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

1962 ಆಂಬ್ಯುಲೆನ್ಸ್ ಸೇವೆಯು ಕರ್ನಾಟಕ ರಾಜ್ಯದ ರೈತರಿಗೆ ಒಂದು ದೊಡ್ಡ ವರದಾನವಾಗಿದೆ. ಕರ್ನಾಟಕ 1962 ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಸಹಾಯವಾಣಿ ಬೆಂಗಳೂರಿನಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಮೂಲಕ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯಾದ್ಯಂತ 275 ಸಂಚಾರಿ ಪಶುವೈದ್ಯಕೀಯ ಘಟಕಗಳ ಮೂಲಕ ಸೇವೆ ಸಲ್ಲಿಸುತ್ತಾ, ಇದೀಗ ತನ್ನ ಮೊದಲ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತಿದೆ.

ಈ ಕಾರ್ಯಕ್ರಮವು, ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ನಡುವಿನ ಸಹಯೋಗ ಮತ್ತು ಮುಂಬೈ ಮೂಲದ ಸಂಸ್ಥೆಯಾದ ಎಡುಸ್‌ಪಾರ್ಕ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ಕಾರ್ಯಗತಗೊಳಿಸಲಾಗಿದ್ದು, ಆ.5, 2023 ರಿಂದ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

1962 ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವೆಯು ತುರ್ತು ಪಶುವೈದ್ಯಕೀಯ ಚಿಕಿತ್ಸೆ, ರೋಗನಿರ್ಣಯ ಮತ್ತು ಸ್ಥಳದಲ್ಲೆ ಮಾಡಬಹುದಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಂತೆ ಸಮಗ್ರ ಶ್ರೇಣಿಯ ಪಶುವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ‌ ಪಶುಪಾಲಕರ ಮನೆ ಬಾಗಿಲಿಗೆ ತಕ್ಷಣದ, ಉತ್ತಮ-ಗುಣಮಟ್ಟದ ಮತ್ತು ಉಚಿತ ಆರೈಕೆಯನ್ನು ನೇರವಾಗಿ ನೀಡುತ್ತಿರುವುದು ರೈತರಿಗೆ ವರದಾನವಾಗಿದೆ.

ಪ್ರಸ್ತುತ, ರಾಜ್ಯದಲ್ಲಿ ಪ್ರತಿದಿನ ಸುಮಾರು 900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಆಗಸ್ಟ್ 2023 ರಿಂದ ಜುಲೈ 2024 ರವರೆಗೆ ಒಟ್ಟು 2,76,011 ಪ್ರಾಣಿಗಳಿಗೆ ತುರ್ತು ಪಶುವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1,78,572 ದನಗಳು, 17,282 ಎಮ್ಮೆಗಳು, 48,566 ಕುರಿಗಳು, 28,293 ಆಡುಗಳು, 359 ಹಂದಿಗಳು ಮತ್ತು 2,939 ನಾಯಿಗಳು ಹಾಗೂ ಇತರೆ ಪ್ರಾಣಿಗಳನ್ನು ಉಪಚರಿಸಲಾಗಿದೆ.

300x250 AD

ಈ ಮಹತ್ವಾಕಾಂಕ್ಷೆ ಯೋಜನೆಯು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸೇವಾಬದ್ಧ ಅಧಿಕಾರಿಗಳ ಅವಿರತ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಯಶಸ್ವಿಯಾಗಿ ಕಾರ್ಯಗತವಾಗುತ್ತಿದೆ.

1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಯೋಜನೆಯು ತುರ್ತು ಚಿಕಿತ್ಸೆ ಅಗತ್ಯವಿರುವ ಪ್ರಾಣಿಗಳಿಗೆ ಸಮಯೋಚಿತ ತಜ್ಞ ಆರೈಕೆಯನ್ನು ನೀಡುವುದರಲ್ಲಿ ಸಫಲವಾಗಿದ್ದು, ತನ್ಮೂಲಕ ರೈತರಿಗೆ ಮತ್ತು ಪ್ರಾಣಿಪ್ರಿಯರಿಗೆ ಅಮೂಲ್ಯವಾದ ವರದಾನವಾಗಿರುವುದು ಸಾಬೀತಾಗಿದೆ.

1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಯೋಜನೆಯು ದಾಂಡೇಲಿ ನಗರಕ್ಕೆ ಬಂದು ಒಂದು ವರ್ಷವಾಗಿದ್ದು, ಕಳೆದ ಮೂರು ತಿಂಗಳಿನಿಂದ ಇದಕ್ಕೆ ಪಶು ವೈದ್ಯರ ನೇಮಕಾತಿಯಾಗಿರುತ್ತದೆ. ಈ ಮೂರು ತಿಂಗಳ ಅವಧಿಯಲ್ಲಿ ದನ ಕರುಗಳು, ಎಮ್ಮೆಗಳು ಸೇರಿದಂತೆ ಒಟ್ಟು 140 ಸಾಕು ಪ್ರಾಣಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಡಾ.ನಿತೀಶ್ ವೀರೇಶ್ ಲಿಂಗದಹಳ್ಳಿಯವರು ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ಸಹಾಯಕರಾಗಿ ಅಭಿಷೇಕ್ ಮತ್ತು ಚಾಲಕರಾಗಿ ಸಗ್ಗು ಮಲ್ಲು ಗಾವಡೆಯವರು 1962 ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಘಟಕದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top