ಕಾರವಾರ: ಭಾರತ ದೇಶದಿಂದ ಜರ್ಮನಿಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸಲು ಜರ್ಮನ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೆ!! Talent Orange ಸಂಸ್ಥೆಯು ಭಾರತದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿ.ಎಸ್ಸಿ/ಜಿ.ಎನ್/ಎಮ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿದ್ದು, ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಆಸಕ್ತ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕವಾದ ಅಭ್ಯರ್ಥಿಗಳನ್ನು ಸಂಸ್ಥೆ ವತಿಯಿಂದ ಆಯ್ಕೆ ಮಾಡಿ ಅವರಿಗೆ ಕೇರಳದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿಯೊಂದಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.
ಅರ್ಹತೆ:- ಬಿ.ಎಸ್ಸಿ(ನರ್ಸಿಂಗ್), ಬಿ.ಎಸ್ಸಿ/ಜಿ.ಎನ್.ಎಮ್ ವಿದ್ಯಾರ್ಹತೆ ಪಡೆದಿರುವ, ಹೊಸಬರು/ಅನುಭವಿಯುಳ್ಳ ಅಭ್ಯರ್ಥಿಗಳು, ವಯೋಮಿತಿ 38 ವರ್ಷ ಒಳಗಿರಬೇಕು (ಮಹಿಳೆಯರು/ಪುರುಷರು). ಮಹಿಳಾ ಸಿಬ್ಬಂದಿಗಳು ಚಿಕ್ಕ ಮಕ್ಕಳನ್ನು ಹೊಂದಿದ್ದಲ್ಲಿ ತಮ್ಮೊಂದಿಗೆ ಕರೆದೊಯ್ಯಲು ಅವಕಾಶವಿರುವುದಿಲ್ಲ. ಕಡ್ಡಾಯವಾಗಿ ಭಾರತೀಯ ನರ್ಸಿಂಗ್ ಲೈಸನ್ಸ್ ಹೊಂದಿದ್ದವರಾಗಿರಬೇಕು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಇಲಾಖೆ ಉಪವಿಭಾಗ ಕಾರವಾರಕ್ಕೆ ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಆಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.