ಸಿದ್ದಾಪುರ: ತಾಲೂಕಿನ ತಾರಖಂಡದ ಗಂಗಾಧರ ಜಟ್ಟು ಗೌಡ ಅವರ ಬಚ್ಚಲುಮನೆಗೆ ಗುರುವಾರ ಬೆಂಕಿಬಿದ್ದು ಬಚ್ಚಲುಮನೆ ಸಂಪೂರ್ಣ ಸುಟ್ಟು ಕರಕಲಾಗಿ ಹಾನಿ ಸಂಭವಿಸಿದೆ.
ಭಾರಿ ಮಳೆಯಿಂದಾಗಿ ಹೊನ್ನೆಕೊಂಬಿನ ತಿಮ್ಮ ದ್ಯಾವಾ ನಾಯ್ಕ ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಈ ಎರಡೂ ಸ್ಥಳಕ್ಕೆ ಕಂದಾಯ ಹಾಗೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಚ್ಚಲುಮನೆ ಬೆಂಕಿಗಾಹುತಿ: ಅಧಿಕಾರಿಗಳ ಭೇಟಿ, ಪರಿಶೀಲನೆ
