ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೋಡ – ಅಣಶಿ ರಾಜ್ಯ ಹೆದ್ದಾರಿ 46ರ ಮರಡಾ ಬಳಿ ಇದ್ದ ಸಿಮೆಂಟ್ ಮೋರಿಯ ಪೈಪ್ ಗಳಲ್ಲಿ,ಅಕ್ಕ ಪಕ್ಕದ ಗಟಾರನಲ್ಲಿ ಹೂಳು ತುಂಬಿದ ಕಾರಣ ಮೋರಿಯ ಪೈಪ್ ಗಳ ಮೂಲಕ ಸರಾಗವಾಗಿ ಹರಿಯಬೇಕಿದ್ದ ಗಟಾರ ಕೆಸರು ನೀರು ರಸ್ತೆಯ ಮೇಲಿನಿಂದ ಹರಿಯುತ್ತಿದೆ.ಇದರಿಂದ ವಾಹನ ಸವಾರರು ಸಂಚಾರ ಮಾಡುವಾಗ ಎಚ್ಚರಿಕೆಯಿಂದ ಸಾಗಬೇಕಾಗಿದೆ, ರಾತ್ರಿಯ ವೇಳೆ ಚಲಿಸುವಾಗ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಬೇಸಿಗೆ ಕಾಲದಲ್ಲಿ ರಸ್ತೆಯ ಅಕ್ಕ ಪಕ್ಕದ ಗಿಡ ಗಂಟಿಗಳನ್ನು, ಗಟಾರನ್ನು ಸ್ವಚ್ಛ ಮಾಡಿದರೆ ಈ ತರಹದ ಸಮಸ್ಯೆಗಳು ಬರುತ್ತಿರಲಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕಳೆದ ಹಲವು ವರ್ಷಗಳಿಂದ ತಾಲೂಕಿನ ಲೋಕೋಪಯೋಗಿ ಇಲಾಖೆಯವರು ಪ್ರತಿ ವರ್ಷ ನಿರ್ವಹಣೆಯ ಕಾಮಗಾರಿಯ ಬಗ್ಗೆ ಲಕ್ಷ್ಯ ವಹಿಸದೇ ಇರುವುದೇ ಈ ತರಹದ ಅಧ್ವಾನಕ್ಕೇ ಕಾರಣವಾಗಿದೆ.ಇನ್ನಾದರೂ ತಾಲೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಈ ಮೊದಲು ತಾಲೂಕಿನ ಲೋಕೋಪಯೋಗಿ ಇಲಾಖೆಯವರು ರಸ್ತೆಯ ಅಕ್ಕ ಪಕ್ಕದ ಗಿಡ ಗಂಟಿ,ಗಟಾರ ಸ್ವಚ್ಚಗೊಳಿಸುವ ನಿರ್ವಹಣೆಯ ಕೆಲಸ ಮಾಡುತ್ತಿದ್ದರು, ಈಗ ಯಾವುದೇ ನಿರ್ವಹಣೆ ನಡೆಯುತ್ತಿಲ್ಲ, ಇನ್ನೂ ಮುಂದೆಯಾದರೂ ಮಾಡಲಿ ಎಂದು ವಾಹನ ಸವಾರ ಗಣಪತಿ ಪಿ. ಆಗ್ರಹಿಸಿದ್ದಾರೆ.
ಹೂಳು ತುಂಬಿದ ಗಟಾರ;ರಸ್ತೆಯ ಮೇಲೆ ಕೆಸರು ನೀರು.
