ಯಲ್ಲಾಪುರ: ತಟ್ಟಿಹಳ್ಳ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೇ 20,000 ಕ್ಯೂಸೆಕ್ಸ್ ನೀರು ಹೊರಬಿಟ್ಟಿದ್ದು, ತಹಸೀಲ್ದಾರ ಅಶೋಕ ಭಟ್ಟ ಸಮಯ ಪ್ರಜ್ಞೆಯಿಂದ ಕಾರಕುಂಡಿ ಹಳ್ಳದಲ್ಲಿ ಮೀನು ಹಿಡಿಯುತ್ತಿದ್ದ 15 ಜನರು ಸುರಕ್ಷಿತವಾಗಿ ಮರಳಿದ್ದಾರೆ.
ಗುರುವಾರ ಯಾವುದೇ ಮುನ್ಸೂಚನೆ ತಟ್ಟಿಹಳ್ಳದಿಂದ ಏಕಾಏಕಿ 20,00೦ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ. ವಿಷಯ ತಿಳಿದ ತಕ್ಷಣ ತಹಸೀಲ್ದಾರ ಅಶೋಕ ಭಟ್ಟ ಇಲಾಖೆಯ ಕಂದಾಯ ನಿರೀಕ್ಷಕರನ್ನು ಕಾರಕುಂಡಿಗೆ ಕಳುಹಿಸಿ ಜನರಿಗೆ ಮಾಹಿತಿ ನೀಡಿದ್ದಾರೆ. ಕಾರಕುಂಡಿ ಹಳ್ಳದಲ್ಲಿ ಮೀನು ಹಿಡಿಯುತ್ತಿದ್ದ ಜನರಿಗೂ ಮಾಹಿತಿ ನೀಡಿ, ಅವರನ್ನು ಅಲ್ಲಿಂದ ಕರೆತರಲಾಗಿದೆ. ತಹಸೀಲ್ದಾರರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿದ್ದು, ಈ ಕುರಿತು ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ.