ಯಲ್ಲಾಪುರ: ತಾಲೂಕಿನ ಕಳಚೆಗೆ ಬಸ್ ಸಂಚಾರ ಪುನಃ ಪ್ರಾರಂಭಿಸಲು ಆಗ್ರಹಿಸಿ ಗ್ರಾಮಸ್ಥರು, ಮಹಿಳೆಯರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.
ಮಳೆ ಜೋರಾಗಿರುವುದರಿಂದ ಕಾಂಕ್ರೀಟ್ ರಸ್ತೆ ಜಾರುತ್ತಿದೆ. ಕಳಚೆ ಭೂಕುಸಿತ ವಲಯವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ನಿಲ್ಲಿಸಲಾಗಿದ್ದು, ಹೆಬ್ಬಾರಕುಂಬ್ರಿವರೆಗೆ ಮಾತ್ರ ಬಸ್ ಸಂಚರಿಸುತ್ತಿದೆ. ಇದರಿಂದ ಕಳಚೆ ಭಾಗದ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಶೀಘ್ರ ಬಸ್ ಸಂಚಾರ ಪುನಃ ಆರಂಭಿಸುವಂತೆ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕರು, ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಅವರನ್ನು ಕರೆಸಿ, ಜನರ ಸಮಸ್ಯೆ ವಿವರಿಸಿ, ಬಸ್ ಸಂಚಾರ ಆರಂಭಿಸಲು ಸೂಚಿಸಿದರು. ಗ್ರಾ.ಪಂ ಸದಸ್ಯ ಗಜಾನನ ಭಟ್ಟ, ಪ್ರಮುಖರಾದ ಆರ್.ಪಿ.ಹೆಗಡೆ, ಸೀತಾ ಹೆಗಡೆ, ಗ್ರಾಮಸ್ಥರು, ಮಹಿಳೆಯರು ಇದ್ದರು.
ಕಳಚೆಗೆ ಬಸ್ ಸಂಚಾರ ಪುನಃ ಪ್ರಾರಂಭಿಸಲು ಆಗ್ರಹ: ಗ್ರಾಮಸ್ಥರಿಂದ ಮನವಿ
