ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ 87 ಮಿ.ಮೀ. ಮಳೆಯಾಗಿದೆ. ಇಲ್ಲಿಯವರೆಗೆ 2175.6 ಮಿ.ಮೀ. ಮಳೆಯಾಗಿದೆ. ಮಂಗಳವಾರ ಸಂಜೆ ಸುರಿದ ಭಾರೀ ಮಳೆಗೆ ಕಣ್ಣಿಗೇರಿಯ ಗ್ರಾಪಂ ವ್ಯಾಪ್ತಿಯ ಕನ್ನಡಗಲ್ ಗ್ರಾಮದಲ್ಲಿ ಮಹಾಬಲೇಶ್ವರ ಹೆಗಡೆ ಅವರ ಅಡಿಕೆ ತೋಟ ಜಲಾವೃತಗೊಂಡಿದ್ದು,ತೋಟದ ಫಲವತ್ತತೆ ಕೊಚ್ಚಿಹೋಗಿ ನಷ್ಟ ಉಂಟಾಗಿದೆ.
ಭಾರೀ ಮಳೆಗೆ ತೋಟ ಜಲಾವೃತ
