Slide
Slide
Slide
previous arrow
next arrow

ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕ

300x250 AD

“ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್| ಸಂನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್ “

ಭಾವಾರ್ಥ:
ದೇವವ್ರತಗಳೆಂದು ಹೆಸರಾಗಿರುವ ಮೂರು ಸಾಮಗಳಿಂದ ಸ್ತುತನಾಗಿರುವದರಿಂದ ‘ತ್ರಿಸಾಮ’. ಸಾಮವನ್ನು ಗಾನಮಾಡುವದರಿಂದ ಸಾಮಗನು.’ವೇದದೊಳಗೆ ಸಾಮವೇದವು ನಾನಾಗಿರುವೆ’. ಎಂಬ (ಗೀ.೧೦-೨೨) ಭಗದ್ವಚನವಿರುವದರಿಂದ ಸಾಮವೇದವೇ ‘ಸಾಮ’.(ಆ ರೂಪದವನೇ ಈತನು). ಎಲ್ಲ ದುಃಖವನ್ನೂ ಶಾಂತಗೊಳಿಸುವ ಪರಮಾನಂದ,ರೂಪದವನಾಗಿರುವುದು ‘ನಿರ್ವಾಣವು’. ಜನನ ಮರಣ ರೂಪವಾದ ಸಂಸಾರವೆಂಬ ರೋಗಕ್ಕೆ ಔಷಧಿಯಾಗಿರುವವನು.ಆದ್ದರಿಂದ ‘ಭೇಷಜವು’. ಸಂಸಾರ ರೋಗದಿಂದ ಬಿಡುಗಡೆಯನ್ನುಂಟು ಮಾಡುವ ಪರವಿದ್ಯೆಯನ್ನು ಗೀತೆಯಲ್ಲಿ ಉಪದೇಶ ಮಾಡಿದನು. ಆದ್ದರಿಂದ ‘ಭೀಷಕ್’ಅಂದರೆ ವೈದ್ಯನು ಎನಿಸುವನು. ವೈದ್ಯರಲ್ಲೆಲ್ಲ ಉತ್ತಮವಾದ ವೈದ್ಯನೆಂದು ಎಂಬ ಶ್ರುತಿಯು ಇದಕ್ಕೆ ಪ್ರಮಾಣ.(ಋ೨-೪-೩೩-೪). ಮೋಕ್ಷಕ್ಕಾಗಿ ನಾಲ್ಕನೆಯ ಆಶ್ರಮವನ್ನು ಮಾಡಿರುತ್ತಾನೆ; ಆದ್ದರಿಂದ ‘ಸನ್ಯಾಸಕೃತ್’ಎನಿಸುವನು. ಸನ್ಯಾಸಿಗಳಿಗೆ ಮುಖ್ಯವಾಗಿ ಜ್ಞಾನಸಾಧನವಾದ ಮನಸ್ಸಿನ ಸಂಯಮ ಅಂದರೆ ‘ಶಮ’ವನ್ನು ಹೇಳಿರುತ್ತಾನೆ.ಆದ್ದರಿಂದ ‘ಶಮನು’.ವಿಷಯ ಸುಖಗಳಲ್ಲಿ ಆಸಕ್ತಿಯಿಲ್ಲದವನಾಗಿದ್ದರಿಂದ ‘ಶಾಂತನು. ಉಪನಿಷತ್ತುಗಳು ಇವನ ಸ್ಥಿತಿಯನ್ನು ನಿಷ್ಕ್ರಿಯನು, ಭಾಗಗಳಿಲ್ಲದವನು, ಮತ್ತು ಶಾಂತನು ಎಂದು ತಿಳಿಸುತ್ತವೆ. ಇವನು ‘ನಿಷ್ಠನು’ ಯಾಕೆಂದರೆ ಎಲ್ಲಾ ಜೀವಿರಾಶಿಗಳ ಆಶ್ರಯಸ್ಥಾನನು, ಇದು ಪ್ರಳಯವಾದಾಗಲೂ ಇವನಲ್ಲಿಯೇ ಇದ್ದು ಮತ್ತೆ ಸೃಷ್ಟಿಯಾಗುತ್ತದೆ.’ಶಾಂತಿಃ’ ಯಾಕೆಂದರೆ ‘ಅವಿದ್ಯೆಯು’ ಸಂಪೂರ್ಣವಾಗಿ ಹೊರಟು ಹೋಗಿರುವದರಿಂದ ಇವನಲ್ಲಿ ಯಾವುದೇ ತಳಮಳಕ್ಕೆ ಅವಕಾಶವಿಲ್ಲದೇ ಸದಾ ‘ಶಾಂತಿ’ಯಿಂದಿರುತ್ತಾನೆ. ‘ಪರ’ ಎಂದರೆ ಉತ್ಕೃಷ್ಟ, ಮರಳಿ ಹಿಂದಕ್ಕೆ ಬರುವುದೆಂಬ ಶಂಕೆಯಿಲ್ಲದ ‘ಅಯನ ‘ಅಂದರೆ ಶ್ರೇಷ್ಠವಾದ ಸ್ಥಾನವು ಈತನದು. ಆದ್ದರಿಂದ ‘ಶಾಂತಿಃ’ ಪರಾಯಣಮ್.
ಸ್ತೋತ್ರದ ವೈಶಿಷ್ಟ್ಯ:

ಮೇಲಿನ ವಿಷ್ಣುಸಹಸ್ರನಾಮದ ಸ್ತೋತ್ರವನ್ನು ವಿಶಾಖಾ ನಕ್ಷತ್ರದ ೨ ನೇ ಪಾದದವರು ಪ್ರತಿನಿತ್ಯವೂ ೧೧ ಬಾರಿಹೇಳಿಕೊಳ್ಳಬೇಕು. ಜೀವನವೆಂಬುದು ಸುಖ-ದುಃಖಗಳ ಸಮ್ಮಿಲನ. ದುಃಖ ಬಂದಾಗ, ಶೋಕ ಬಂದಾಗ ಬೆಚ್ಚದೇ, ಬೆದರದೆ, ಜಗ್ಗದೆ ಕುಗ್ಗದೆ, ಧೈರ್ಯ, ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. “ನನ್ನನು ಈ ಎಲ್ಲಾ ದುಃಖ ಶೋಕಗಳಿಂದ ಬೇಗನೆ ಪಾರುಮಾಡು ‘ಓ ಭಗವಂತನೇ’ ಎಂದು ಆತ್ಮವಿಶ್ವಾಸ ಹಾಗೂ ಶ್ರದ್ಧಾ ಭಕ್ತಿಯಿಂದ ಯಾವುದೇ ನಕ್ಷತ್ರದ ಯಾವುದೇ ಪಾದದಲ್ಲಿ ಜನಿಸಿದ್ದರೂ, (ಎಲ್ಲರೂ) ದಯಾಮಯನಾದ ಆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳಬೇಕಾದ ಸ್ತೋತ್ರವೇ ಇದು.

300x250 AD

( ಸಂ:-ಡಾ. ಚಂದ್ರಶೇಖರ ಎಲ್.ಭಟ್ ಬಳ್ಳಾರಿ)

Share This
300x250 AD
300x250 AD
300x250 AD
Back to top