Slide
Slide
Slide
previous arrow
next arrow

ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆ ಅಪಾರ: ಜಿ.ಎಸ್.ನಾಯ್ಕ್

300x250 AD

ಹೊನ್ನಾವರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಹೇಳಿದರು.

ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯವಾಗಿದೆ. ವಿಶೇಷಚೇತನ ವಿದ್ಯಾರ್ಥಿಗಳನ್ನೂ ಗುರುತಿಸುವ ಕಾರ್ಯ ಹೊನ್ನಾವರ ಪತ್ರಕರ್ತರಿಂದ ನಡೆಯುತ್ತಿದೆ. ಸಮಾಜದ ಅಭಿವೃದ್ಧಿಗೆ ಪತ್ರಕರ್ತರು ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹೊನ್ನಾವರದಲ್ಲಿ ಪತ್ರಕರ್ತರ ಸಂಘಟನೆ ಒಗ್ಗಟ್ಟಿನಿಂದ ಕೂಡಿದೆ. ಇದು ಖುಷಿಯ ವಿಚಾರ. ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಪತ್ರಕರ್ತರು. ಹೊನ್ನಾವರದಲ್ಲಿ ಪ್ರಾಮಾಣಿಕ ಪತ್ರಕರ್ತರ ತಂಡವಿದೆ. ಅಧಿವೇಶನದಲ್ಲಿ ಅವಕಾಶ ಸಿಕ್ಕರೆ ಪತ್ರಕರ್ತರ ಬೇಡಿಕೆಗಳ ಕುರಿತು ಪ್ರಸ್ತಾಪ ಮಾಡುತ್ತೇನೆ ಎಂದರು.

300x250 AD

ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ್ ಉಪನ್ಯಾಸ ನೀಡಿಪತ್ರಕರ್ತರನ್ನು ಸಶಕ್ತರನ್ನಾಗಿಸುವ ಮತ್ತು ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಆಳುವವರ ಮತ್ತು ಸಮಾಜದ ಮೇಲಿದೆ. ಇಂದು ಪತ್ರಿಕೆಯನ್ನು ಖರೀದಿಸಿ ಓದುವ ಮನೋಭಾವನೆ ಕಡಿಮೆಯಾಗುತ್ತಿದೆ. ಬೌದ್ಧಿಕ ವಿಕಸನಕ್ಕೆ ಪತ್ರಿಕೆಗಳು ಸಹಕಾರಿ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಸರ್ಕಾರದ ಸೌಲಭ್ಯಗಳಿವೆ. ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕಾರಂಗಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ. ಕಾರ್ಮಿಕ ಇಲಾಖೆಯಿಂದ ಸೌಲಭ್ಯ ಸಿಗುಂತಾಗಬೇಕು. ಈ ದಿಶೆಯಲ್ಲಿ ಜನಪ್ರತಿನಿಧಿಗಳು ಒಂದಾಗಿ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, ಒಂದು ಊರಿನ ಅಭಿವೃದ್ಧಿಗೆ ಪತ್ರಕರ್ತರು ಮತ್ತು ಜನಪ್ರತಿನಿಧಿಗಳು ಒಟ್ಟೊಟ್ಟಿಗೆ ದುಡಿಯಬೇಕು. ಕನಿಷ್ಠ ಸಂಬಳದಲ್ಲಿ ಗರಿಷ್ಠ ದುಡಿಮೆ ಪತ್ರಕರ್ತರದ್ದು. ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕೆಗಳು ಶ್ರಮಿಸುತ್ತಿವೆ. ಪತ್ರಿಕೆಯ ವರದಿಗಳು ಓದುಗನ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕು. ದೇಶ ಕಟ್ಟಲು ಪತ್ರಿಕೆಗಳು ಬಹಳಷ್ಟು ಕೆಲಸ ಮಾಡಿವೆ. ತುರ್ತು ಪರಿಸ್ಥಿತಿಯಲ್ಲಿ ಲೋಪದೋಷಗಳನ್ನು ಬೆಳಕಿಗೆ ತಂದು ಜವಾಬ್ದಾರಿಯನ್ನು ಸಮರ್ತವಾಗಿ ನಿರ್ವಹಿಸಿವೆ. ದೇಶದ ಒಳಗೆ ಸೈನಿಕರಂತೆ ಪ್ರಜಾಪ್ರಭುತ್ವದ ರಕ್ಷಣೆ ಮಾಡುತ್ತಿವೆ.
ತಾಲೂಕು ಸಂಘದ ಅಧ್ಯಕ್ಷ ಸತೀಶ ತಾಂಡೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರಾದ ಶ್ರೀಧರ ನಾಯ್ಕ, ವಿನಾಯಕ ಮೇಸ್ತ ಹಾಗೂ ವಿಶೇಷ ಚೇತನ ಪ್ರತಿಭಾವಂತ ವಿದ್ಯಾರ್ಥಿ ಹರ್ಷ ನಾಯ್ಕ ಖರ್ವಾ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯ ಎಚ್.ಎಂ.ಮಾರುತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ನಾಯ್ಕ ಖರ್ವಾ ಸನ್ಮಾನಪತ್ರ ವಾಚಿಸಿದರು. ಸುಧೀಶ ನಾಯ್ಕ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ವಿಶ್ವನಾಥ ಸಾಲ್ಕೋಡ ವಂದಿಸಿದರು. ಸಂಘದ ಸದಸ್ಯರಾದ ಗೋಪಾಕೃಷ್ಣ ಭಟ್, ಮುರಳೀಧರ ಗಾಯತೊಂಡೆ, ಶಿವಾನಂದ ಮೇಸ್ತ ಸಹಕರಿಸಿದರು.

Share This
300x250 AD
300x250 AD
300x250 AD
Back to top