Slide
Slide
Slide
previous arrow
next arrow

ಗೂಡಂಗಡಿಯಲ್ಲಿ ಬೆಂಕಿ

300x250 AD

ದಾಂಡೇಲಿ : ನಗರದ ಜೆ.ಎನ್ ರಸ್ತೆಯಲ್ಲಿರುವ ಗೂಡಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಾನಿಯಾಗಿರುವ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.

ಸುರೇಶ್ ಎಂಬವರ ಗೂಡಂಗಡಿ ಇದಾಗಿದ್ದು, ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ಸೇರಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಅಷ್ಟೊತ್ತಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನವು ಸ್ಥಳಕ್ಕಾಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದೆ.
ಸ್ಥಳದಲ್ಲಿ ಸಮಾಜಸೇವಕರಾದ ಪ್ರವೀಣ್ ಜನ್ನು, ಪ್ರವಾಸೋದ್ಯಮಿ ಆಕಾಶ್ ಕದಂ ಹಾಗೂ ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರು ಬೆಂಕಿ‌ ನಂದಿಸಲು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top