ಯಲ್ಲಾಪುರ: ತಾಲೂಕಿನ ಕಿರವತ್ತಿಯಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಆಗ್ರಹಿಸಿ ಶುಕ್ರವಾರ ಪಿಡಿಒ ಅಣ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕಿರವತ್ತಿ ಹಿಂದೂ ರುದ್ರಭೂಮಿಯಲ್ಲಿ ನೀರಿನ ಸೌಕರ್ಯಗಳಿಲ್ಲ, ಸಾಗುವ ಮಾರ್ಗದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. ರುದ್ರಭೂಮಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮೂಲಭೂತ ಸೌಕರ್ಯಗಳಿಲ್ಲದೇ ಜನ ಸಮಸ್ಯೆ ಎದುರಿಸುತ್ತಿದ್ದು, ಅದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಳದ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮಖರಾದ ಸೋಮೇಶ್ವರ ನಾಯ್ಕ, ರಜತ್ ಬದ್ಧಿ, ಪ್ರಭು ಚಿಂಚಕಂಡಿ, ಬಾಪು ತಾಟೆ, ಗಾಂಧೀ ಸೋಮಾಪುರಕರ, ಅರ್ಜುನ್ ಬೆಂಗೇರಿ, ವಿಠ್ಠಲ ಪಟಕಾರೆ, ಸುಭಾಷ ಶೇಷಗಿರಿ, ಪರಶುರಾಮ ಮಂಗಲಿ,ವಿಶಾಲ ಸುನಾರ್, ಸೋನು ಜಂಗ್ಲೆ,ಕೇಶವ ಕಾಂಬ್ಳೆ,ಅಶೋಕ ದಿಬ್ಬದಮನಿ,ಪರಶುರಾಮ ತಿರಕಪ್ಪನವರ,ದೇವರಾಜ,ಉದಯ,ಅಜಯ ಶಿಂದೆ, ಭಾಗವಹಿಸಿದ್ದರು.