ಕಾರವಾರ: ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಆಡಳಿತ ಕಚೇರಿಗೆ ಭೇಟಿ ನೀಡಿದ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ನೂತನವಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತ್ರಾಸಿಯ ಕಚೇರಿಯಲ್ಲಿ ಭಾನುವಾರ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೋಹನ ಬಾನಾವಳಿಕರ್, ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ್ ಸಾರಂಗ, ಪ್ರ.ಕಾರ್ಯದರ್ಶಿ ಕೃಷ್ಣ ತಾಂಡೇಲ್, ಖಜಾಂಚಿ ಜಿ.ಕೆ.ಸಿನ್ಹಾ, ಪದಾಧಿಕಾರಿಗಳಾದ ಸದಾನಂದ ಖಾರ್ವಿ, ಅಣ್ಣಪ್ಪ ಖಾರ್ವಿ, ವಿ ಕೆ ಸುರೇಶ್, ಜಿ ಎನ್ ಖಾರ್ವಿ, ಪ್ರಕಾಶ್ ಖಾರ್ವಿ, ರಾಮ ಖಾರ್ವಿ, ನಾಗರಾಜ್ ಖಾರ್ವಿ ಕೊಲ್ಲೂರು, ಎನ್ ಡಿ ಖಾರ್ವಿ, ಮಹೇಶ್ ಖಾರ್ವಿ, ಗಣೇಶ್ ಮೇಸ್ತ ಉಪಸ್ಥಿತರಿದ್ದರು.