ಶಿರಸಿ: ಸಸ್ಯ ನೆಟ್ಟರಷ್ಟೇ ಆಗಿಲ್ಲ, ಅದರ ರಕ್ಷಣೆ ಜವಾಬ್ದಾರಿಯೂ ತೆಗೆದುಕೊಳ್ಳಬೇಕು ಎಂದು ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶಿಸಿದರು.
ಅವರು ಅರಣ್ಯ ಇಲಾಖೆಯ ಸಹಕಾರದಲ್ಲಿ ಶ್ರೀಮಠದ ಸಸ್ಯಲೋಕದಲ್ಲಿ ನಡೆದ ಪವಿತ್ರ ವೃಕ್ಷಾರೋಪಣದಲ್ಲಿ ಸ್ವತಃ ಶ್ರೀಗಳವರೇ ಸಸ್ಯವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುವ ವೇಳೆ ತಿಳಿಸಿದರು. ಸಸ್ಯದ ಸಂರಕ್ಷಣೆ ಅಗತ್ಯ. ಅದರ ಸಂಪೂರ್ಣ ಜವಾಬ್ದಾರಿಯನ್ನು ನಾವು ಹೊರಬೇಕು. ಅದರ ಪಾಲನೆಯನ್ನು ಮಾಡಬೇಕು. ಅದು ನಮ್ಮ ಕರ್ತವ್ಯ ಎಂದರು.
ಮಠದ ಕಿರಿಯ ಶ್ರೀಗಳಾದ ಶ್ರೀಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿಗಳು ಸಾನ್ನಿಧ್ಯ ನೀಡಿ ಪವಿತ್ರ ವೃಕ್ಷಾರೋಪಣ ಮಾಡಿದರು. ಈ ವೇಳೆ ಇಲಾಖೆ ಅಧಿಕಾರಿಗಳು, ಮಠದ ಪದಾಧಿಕಾರಿಗಳಿದ್ದರು.
ಸುಮಾರು 100 ಕ್ಕೂ ಹೆಚ್ಚು ಸಸಿಗಳನ್ನು ಇಲ್ಲಿ ನೆಡಲಾಯಿತು.