ಯಲ್ಲಾಪುರ: ತಾಲೂಕಿನ ಕಾನಗೋಡ ಭಟ್ರಕೇರಿಯ ಚಿನ್ಮಯ ನಾಗರಾಜ ಹೆಗಡೆ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ನಾಗರಾಜ ಹೆಗಡೆ ಮತ್ತು ಸವಿತಾ ಹೆಗಡೆಯವರ ಪುತ್ರನಾಗಿದ್ದು, ಕಾನಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ, ಭೈರುಂಬೆಯ ಶಾರದಾಂಬಾ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ಎಂ. ಇ. ಎಸ್. ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುತ್ತಾನೆ. ಈತನ ಸಾಧನೆಗೆ ಅಜ್ಜ, ಅಜ್ಜಿ ಸೇರಿದಂತೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.