Slide
Slide
Slide
previous arrow
next arrow

ಚಂದಗುಳಿಯಲ್ಲಿ ಸುದರ್ಶನ ವಿಜಯ ಯಕ್ಷಗಾನ ಸಂಪನ್ನ

300x250 AD

ಯಲ್ಲಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ (ಬೆಂಗಳೂರು) ಸಹಕಾರದಲ್ಲಿ, ಯಕ್ಷಚಂದನ (ರಿ) ದಂಟಕಲ್ ಸಂಸ್ಥೆಯ ಅಡಿಯಲ್ಲಿ , ಜು.13, ಶನಿವಾರ ಸಂಜೆ 6 ಗಂಟೆಯಿಂದ ಶ್ರೀ ಸಿದ್ಧಿವಿನಾಯಕ ಗಂಟೆ ಗಣಪತಿ ದೇವಸ್ಥಾನ ಚಂದಗುಳಿಯಲ್ಲಿ ಯಕ್ಷಸಂಜೆ ಕಾರ್ಯಕ್ರಮ ಸಂಪನ್ನಗೊಂಡಿತು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಕಲ್ಪ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರಮೋದ್ ಹೆಗಡೆ ಯಲ್ಲಾಪುರ ಅತ್ಯಂತ ಶ್ರೇಷ್ಠ ಕಲೆ ಯಕ್ಷಗಾನ. ಅದೀಗ ಜಾಗತೀಕ ಮಟ್ಟದಲ್ಲಿ ಬೆಳೆದು ಯಶಸ್ವಿಯಾಗಿದೆ. ಯಕ್ಷಗಾನ ಪರಂಪರೆಯಲ್ಲಿ ಬಂದ ದಂಟಕಲ್ ಕುಟುಂಬ ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.
ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಚಂದಗುಳಿಯ ಮೊಕ್ತೇಸರರಾದ ಶ್ರೀ ಲಕ್ಷ್ಮೀನಾರಾಯಣ ತಾರೀಮಕ್ಕಿ ಅವರು ಮಾತನಾಡಿ ಹಲವಾರು ವರ್ಷಗಳ ಕಾಲ ಯಕ್ಷಗಾನ ಸಂಘಟನೆಯನ್ನು ಮಾಡುತ್ತಿರುವುದು ಶ್ಲಾಘನೀಯ ವಿಚಾರ. ಭಗವಂತನ ಅನುಗ್ರಹ ದೈವಿ ಶಕ್ತಿಯೇ ಇಂತಹ ಸಂಘಟನೆಗಳಿಗೆ ಕಾರಣವಾಗಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಕರಾದ ಎನ್.ವಿ.ಹೆಗಡೆ ಹಿತ್ಲಳ್ಳಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿರಿಯ ವರ್ತಕರಾದ ಡಿ. ಶಂಕರ ಭಟ್ ಯಲ್ಲಾಪುರ
ಕಾರ್ಯಕ್ರಮದ ಕುರಿತು ಶ್ಲಾಘನೀಯ ನುಡಿಗಳನ್ನಾಡಿದರು. ಯಕ್ಷಚಂದನ ಸಂಸ್ಥೆಯ ರೂವಾರಿಗಳು ಹಾಗೂ ಸಂಚಾಲಕರು ಆಗಿರುವ ಸತೀಶ ಹೆಗಡೆ ದಂಟಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ರೂಪುರೇಷೆ ವಿವರಿಸಿದರು.
ಯಕ್ಷಚಂದನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಎಸ್ ಹೆಗಡೆ ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದು ಯಕ್ಷಚಂದನ ನಡೆದು ಬಂದ ದಾರಿಯನ್ನು ವಿವರಿಸಿದರು. ಶ್ರೀ ವೇದಮೂರ್ತಿ ವೆಂಕಟ್ರಮಣ ಭಟ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಆನಂತರ‌‌ ಯಕ್ಷಗಾನ ಆಖ್ಯಾನ
‘ಸುದರ್ಶನ ವಿಜಯ’ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ ದಂಟಕಲ್ ಅವರುಗಳು ತಮ್ಮ ಸುಶ್ರಾವ್ಯವಾದ ಕಂಠಸಿರಿಯಿಂದ ಜನಮನ ಗೆದ್ದರು.
ಮದ್ದಲೆವಾದಕರಾಗಿ ಶಂಕರ ಭಾಗವತ ಶಿರಸಿ ಅವರು ತಮ್ಮ ಅದ್ಭುತವಾದ ಮದ್ದಲೆಯ ಪೆಟ್ಟಿನೊಂದಿಗೆ ಜನಮನ ಸೂರೆಗೊಂಡರು. ಜೊತೆಯಲ್ಲೊ ನಾರಾಯಣ ಭಟ್ ಅವರು ಮದ್ದಲೆಯಲ್ಲಿ ಪಾಲ್ಗೊಂಡರು. ಚೆಂಡೆ ವಾದನದಲ್ಲಿ ಪ್ರಸನ್ನ ಭಟ್ ಹೆಗ್ಗಾರು ರಘುಪತಿ ಹೆಗಡೆ ಹೂಡೇಹದ್ದ ಅವರು ಅತ್ಯುತ್ತಮ ಕೈಚಳಕ ತೋರಿದರು.
ಮುಮ್ಮೇಳದಲ್ಲಿ ಶತ್ರುಸೂದನನಾಗಿ ವಿನಯ ಬೆರೋಳ್ಳಿವರು ತಮ್ಮ ಗತ್ತು ಗಾಂಭೀರ್ಯದ ಅಭಿನಯದಿಂದ ಜನಮನ್ನಣೆ ಪಡೆದರು.
ಲಕ್ಷ್ಮೀಯ ಪಾತ್ರ ನಿರ್ವಹಿಸಿದ ನಾಗರಾಜ ಕುಂಕಿಪಾಲ ಅವರು ತಮ್ಮ ಲಾಲಿತ್ಯ ಪೂರ್ಣ ಕುಣಿತ ಫ್ರೌಡಿಮೆಯ ಮಾತಿನಿಂದ ಜನಮಾನಸದಲ್ಲಿ ನೆಲೆ ನಿಂತರು.
ದೇವೆಂದ್ರನ ಪಾತ್ರದಲ್ಲಿ ವೆಂಕಟೇಶ್ ಬಗರಿಮಕ್ಕಿ ಅವರು ಉತ್ತಮ ಮುಖವರ್ಣಿಕೆಯಲ್ಲಿ ಕಾಣಿಸಿಕೊಂಡರು. ವಿಷ್ಣುವಿನ ಪಾತ್ರದಲ್ಲಿ ಸನ್ಮಯ ಭಟ್ ಅವರು ತಮ್ಮ ಸುಂದರ ಅಭಿನಯ ಕುಣಿತ ಹಾಗೂ ಮಾತಿನೊಂದಿಗೆ ಮಿಂಚಿದರು.ಸುದರ್ಶನನ ಪಾತ್ರದಲ್ಲಿ ನಿತಿನ್ ಹೆಗಡೆ ಅವರು ಲೀಲಾಜಾಲವಾದ ಸಾಂಪ್ರದಾಯಿಕ ಕುಣಿತ ಸಂದರ್ಭಕ್ಕೆ ತಕ್ಕ ಮಾತಿನೊಂದಿಗೆ ರಂಜಿಸಿದರು. ಸುಮಾರು ಐದುನೂರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದ ಸವಿಯನ್ನು ಉಂಡರು.

300x250 AD
Share This
300x250 AD
300x250 AD
300x250 AD
Back to top