Slide
Slide
Slide
previous arrow
next arrow

ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

300x250 AD

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ| ಅನಿರ್ದೇಶ್ಯವಪುಃ ಶ್ರೀಮಾನ್ ಅಮೇಯಾತ್ಮಾ ಮಹಾದ್ರಿಧೃಕ್”||

ಭಾವಾರ್ಥ:-

ಕವಿ,ಕಲಾವಿದ ಅಥವಾ ವಿಜ್ಞಾನಿಗಳಲ್ಲಿ ಕಂಡುಬರುವ ಜ್ಞಾನವು ಪರಮಾತ್ಮನ ಅನುಗ್ರಹದಿಂದ ಬಂದುದಾಗಿದೆ. ಸಮಸ್ತ ಬುದ್ಧಿವಂತಿಕೆಯ ಭಂಡಾರವಾದ ಪರಮಾತ್ಮನು ‘ಮಹಾಬುದ್ಧಿ’ಶಾಲಿಯು. ಉತ್ಪತ್ತಿಗೆ ಕಾರಣವಾದ ಶಕ್ತಿ(ವೀರ್ಯ)ಯು ಪರಮಾತ್ಮನದ್ದೇ ಆಗುವದರಿಂದ ಅವನು ‘ಮಹಾವೀರ್ಯನು’ ಮಹತ್ತಾದ ಶಕ್ತಿಯು ಎಂದರೆ ಸಾಮರ್ಥ್ಯವು  ಈತನದು.ಆದ್ದರಿಂದ ‘ಮಹಾಶಕ್ತಿಯು’. ಶೋಭಾಯಮಾನವಾದ ಪ್ರಭೆಯುಳ್ಳವನು. ಆತ್ಮಚೈತನ್ಯವು ಎಲ್ಲವನ್ನೂ ಬೆಳಕು ನೀಡುವ ಸಾಮರ್ಥ್ಯವಿರುವ ಸೂರ್ಯ,ಚಂದ್ರ,ನಕ್ಷತ್ರ,ಅಗ್ನಿ,ವಿದ್ಯುತ್ ಮುಂತಾದವುಗಳನ್ನು ಸಹ ಪ್ರಕಾಶಗೊಳ್ಳುವಂತೆ ಮಾಡುತ್ತದೆ. ಇದಲ್ಲದೆ ಇವನೇ ಸ್ವತಃ ಬೆಳಕಿನ ಸ್ವರೂಪನಾಗಿದ್ದಾನೆ.ಒಳಗೂ ಹೊರಗೂ ಇರುವ ದ್ಯುತಿ(ಕಾಂತಿ)ಯು ಈತನಿಗೆ ಇದೆಯಾಗಿದ್ದರಿಂದ ಈತನು ‘ಮಹಾದ್ಯುತಿ’ಯು.

ತನ್ನ ಅನುಭವಕ್ಕೆ ಮಾತ್ರ ತಿಳಿಯಬರುವುದಾದ್ದರಿಂದ ‘ಅದು       ಇಂಥದ್ದು’ ಎಂದು ಮತ್ತೊಬ್ಬರಿಗೆ ಅದನ್ನು ಗೊತ್ತುಪಡಿಸಿ ಹೇಳಲು ಆಗುವಂತಿಲ್ಲವೋ ಅದು ‘ಅನಿರ್ದೇಶ್ಯವು’. ಅಂತಹ ವಪು(ಶರೀರ)ವು ಈತನಿಗೆ ಇವೆಯಾಗಿದ್ದರಿಂದ ‘ಅನಿರ್ದೇಶ್ಯವಪುವು’. ‘ಶ್ರೀ’ ಎಂದರೆ ಐಶ್ವರ್ಯ. ಸಕಲ ಐಶ್ವರ್ಯಗಳ ಸಂಕೇತವಾದ ಶ್ರೀಯು ಜೊತೆಯಲ್ಲಿ ಇರುವವನಾಗಿದ್ದರಿಂದ ‘ಶ್ರೀಮಾನ್’ ಎನಿಸುತ್ತಾನೆ.ಯಾವ ಜೀವರಿಂದಲೂ ಪ್ರಮಾಣದಿಂದ ಅಳೆಯಲಿಕ್ಕಾಗದ (ಅಮೇಯ) ‘ಆತ್ಮವು’ಬುದ್ಧಿಯು ಯಾವಾತನಿಗೆದೆಯೋ ಆತನೇ ಈ ‘ಅಮೆಯಾತ್ಮನು’ ‘ದೊಡ್ಡದಾದ ಗಿರಿಯನ್ನು ಎಂದರೆ ಬೆಟ್ಟವನ್ನು,ಮಂದಾರವನ್ನೂ ಗೋವರ್ಧನವನ್ನೂ (ಯಥಾಕ್ರಮವಾಗಿ)ಅಮೃತವನ್ನು ಕಡೆದ(ಮಂಥನ) ಕಾಲದಲ್ಲಿಯೂ, ಗೋವುಗಳನ್ನು ರಕ್ಷಣೆ ಮಾಡಿದ ಕಾಲದಲ್ಲಿಯೂ ಈತನು ಧರಿಸಿರುವನು.(ಎತ್ತಿರುವನು).ಆದ್ದರಿಂದ ‘ಮಹಾದ್ರಿಧೃಕ್’ ಎನಿಸಿರುತ್ತಾನೆ .

300x250 AD

ಈ ಶ್ಲೋಕದ ವೈಶಿಷ್ಟ್ಯ:- ಇದು ಮೃಗಶಿರ 3(ಮೂರು)ನೇ ಪಾದದಲ್ಲಿ ಜನಿಸಿದವರು ಪ್ರತಿ ನಿತ್ಯ 11 ಬಾರಿ ಹೇಳಿಕೊಳ್ಳಬೇಕಾದ ಶ್ಲೋಕ.

ವಿದ್ಯಾರ್ಥಿಗಳು ಯಾವುದೇ ನಕ್ಷತ್ರದಲ್ಲಿ ಜನಿಸಿದ್ದರೂ ಈ ಸ್ತೋತ್ರ  ಪ್ರತಿನಿತ್ಯ ಹೇಳಬೇಕು.ಯಾಕೆಂದರೆ ಈ  ಸ್ತೋತ್ರ ಪಠಿಸುವದರಿಂದ ಬುದ್ಧಿ ತೀಕ್ಷ್ಣವಾಗುತ್ತದೆ. ಮಕ್ಕಳಿಗೆ ಗಣಿತ,ಗಣಕ ಮತ್ತು ವಿಜ್ಞಾನ ವಿಭಾಗಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಪರಿಣಿತಿ ಬರುತ್ತದೆ.            ಸಂ:-(ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ)

Share This
300x250 AD
300x250 AD
300x250 AD
Back to top