Slide
Slide
Slide
previous arrow
next arrow

ಎನ್‌ಪಿಎಸ್ ರದ್ದು, ಏಳನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹ: ಜು.13ಕ್ಕೆ ಮನವಿ ಸಲ್ಲಿಕೆ

300x250 AD

ಯಲ್ಲಾಪುರ: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಸಂಜೆ ಸರ್ಕಾರಿ ನೌಕರ ಸಂಘದ ಮತ್ತು ಎಲ್ಲಾ ವೃಂದ ಸಂಘಗಳ ಪದಾಧಿಕಾರಿಗಳ ಸಭೆಯನ್ನು ಸಂಘದ ತಾಲೂಕಾ ಅಧ್ಯಕ್ಷ ಪ್ರಕಾಶ್ ನಾಯಕ ಅಧ್ಯಕ್ಷತೆಯಲ್ಲಿ ನಡೆಯಿತು.

ಏಳನೇಯ ವೇತನ ಆಯೋಗ ನೀಡಿದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ಎನ್‌ಪಿಎಸ್ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರಲು ಎಲ್ಲ ವೃಂದ ಸಂಘಗಳು ಸಹಮತ ವ್ಯಕ್ತಪಡಿಸಿದರು.

300x250 AD

ಈ ವಿಷಯವಾಗಿ ಜು.13 ರಂದು ಬೆಳಿಗ್ಗೆ 9.30ಕ್ಕೆ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ನಂತರ ತಹಶಿಲ್ದಾರರಿಗೆ ಮನವಿ ಕೊಡಲು ನಿರ್ಧರಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ,ತಾಲೂಕಾ ಅಧ್ಯಕ್ಷ ಆರ್.ಆರ್. ಭಟ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಜಯ ನಾಯಕ, ನ್ಯಾಯಾಂಗ ಇಲಾಖೆಯಿಂದ ರಾಮಚಂದ್ರ. ಯಎಸ್‌ಡಿಎ ನೌಕರ ಸಂಘದ ಜಿ.ಎಸ್. ಪತ್ರೆಕರ, ನಿವೃತ್ತಿ ನೌಕರ ಸಂಘದ  ಎಸ್.ಎಲ್. ಜಾಲಿಸತ್ಗಿ,ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ ಶ್ರೀನಿವಾಸ ನಾಯಕ,  ರಾಜ್ಯ ಸರಕಾರಿ, ಆರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ಜಿ.ಸಂತೋಷ್ ಆರ್. ಡಬ್ಲ್ಯೂಎಸ್ ಸಂತೋಷ್ ಬಂಟ ಪಿಡಿಓ ಸಂಘದ ನಾರಾಯಣ ಗೌಡ ಆರೋಗ್ಯ ಇಲಾಖೆಯ ಜಿಎಂ ಭಟ್, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗೊಜನೂರ,ರಾಜ್ಯ ಪರಿಷತ್ ಸದಸ್ಯ ಸಂಜೀವಕುಮಾರ್ ಹೊಸ್ಕೇರಿ,ನೌಕರ ಸಂಘದ ಖಜಾಂಚಿ ಎಸ್.ಆರ್. ನಾಯಕ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top