Slide
Slide
Slide
previous arrow
next arrow

ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿ ಶಕ್ತಿಯನ್ನು ಕಾಂಗ್ರೆಸ್‌ಗೆ ತೋರಿಸಿದೆ: ಸಂಸದ ಕಾಗೇರಿ

300x250 AD

ನಿಚ್ಚಳಮಕ್ಕಿಯಲ್ಲಿ  ಸಂಸದ ವಿಶ್ವೇಶ್ವರ‌ ಹೆಗಡೆಗೆ ಅಭಿನಂದನಾ ಸಮಾರಂಭ

ಭಟ್ಕಳ : ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲವತಿಯಿಂದ ಉತ್ತರ ಕನ್ನಡ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ  ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನಾ ಕಾರ್ಯಕ್ರಮವು ಇಲ್ಲಿನ ಆಸರಕೇರಿ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.

ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಟ್ಕಳ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಡಾ.ಚಿತ್ತರಂಜನ್ , ತಿಮ್ಮಪ್ಪ ನಾಯ್ಕ ಹಾಗೂ ಹಿರಿಯ ಮುಖಂಡರನ್ನು ಈ ವೇಳೆ ನೆನಪು ಮಾಡಿಕೊಂಡು, ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದ ಬಿಜೆಪಿ ಕಾರ್ಯಕರ್ತನಾದ ಸಚಿನ ಮಹಾಲೆಯನ್ನು ನೆನೆಪಿಸಿಕೊಂಡು. ಸಚಿನ ಮಹಾಲೆ ನಮಗೆಲ್ಲ ಒಬ್ಬ ಸಹಾಯಕನಾಗಿದ್ದು ಒಬ್ಬ ಸ್ನೇಹಿತನಾಗಿ ನಮೆಲ್ಲ ಚಟುವಟಿಕೆಗೆ ಒಬ್ಬ ಕೇಂದ್ರ ಬಿಂದುವಾಗಿದ್ದ. ಆದರೆ ದೇವರ ಇಚ್ಛೆ ಈಗ ಆತ ನಮ್ಮೆಲ್ಲರನ್ನು ಅಗಲಿದ್ದಾನೆ. ಆತನ ಆತ್ಮಕ್ಕೆ ಶಾಂತಿಸಿಗಲಿ ಎಂದರು.ನಮ್ಮ ರಾಜ್ಯದಲ್ಲಿ ಪ್ರಕೃತಿಯ ವಿಕೋಪದಿಂದಾಗಿ ಅತಿವೃಷ್ಟಿ ಆಗುತ್ತಿರುವುದನ್ನು ನಾವೆಲ್ಲ ಕಾಣುತಿದ್ದೇವೆ. ಇದರಿಂದ ಅನೇಕ ತೊಂದರೆಗಳಾಗಿದ್ದು ಮನೆಗಳಿಗೆ ನೀರು ನುಗ್ಗಿದೆ. ಅನೇಕ ಮನೆಗಳು ಕುಸಿದು ಬಿದ್ದಿದೆ ಎಂದರು.

ಇಂದಿನ ಅಭಿನಂದನಾ ಕಾರ್ಯಕ್ರಮ ಜಿಜ್ಞಾಸೆಯ ವಿಷಯವಾಗಿದ್ದು. ಇವತ್ತು ನೀವು ನನಗೆ ಅಭಿನಂದಿಸುವುದು ಅಥವಾ ನಾನು ನಿಮಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿ, ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆಯಾದಗ ನೀವು ನನಗೆ ಅಭಿನಂದಿಸುವುದು ಸಹಜ. ಆದರೆ ನೀವು ಅಭಿನಂದಿಸುವುದರ ಜೊತೆ ಜೊತೆಯಲ್ಲಿ ನಾನು ಕೃತಜ್ಞತೆ ಹೇಳಬೇಕಾಗುವುದು ನನ್ನ ಬಹಳ ದೊಡ್ಡ ಜವಾಬ್ದಾರಿ ಹಾಗೂ ನನ್ನ ಕರ್ತವ್ಯವಾಗಿದೆ. ಯಾವ ಮತದಾರರು ರಾಜ್ಯದಲ್ಲಿಯೇ ಅತಿ ಹೆಚ್ಚು ಮತವನ್ನು ನೀಡಿ ನಮ್ಮ ಕ್ಷೇತ್ರದಿಂದ ಆಯ್ಕೆ ಮಾಡಿದ್ದಾರೋ ಆ ಮತದಾರರಿಗೆ ನಾವೆಲ್ಲ ಸೇರಿಕೊಂಡು  ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ನಾನು ಅಭಿಮಾನದಿಂದ ಹೇಳುತ್ತೇನೆ ಕಾಂಗ್ರೆಸ್ ಪಕ್ಷ ನೇರವಾಗಿ ಸ್ಪರ್ಧೆ ಮಾಡಿದಾಗ ನಾವು ಅತಿ ಹೆಚ್ಚು ಮತ ಪಡೆದ ಮೊಟ್ಟ  ಮೊದಲ ಲೋಕ ಸಭಾ ಚುನಾವಣೆ ಇದಾಗಿದೆ. ಕಾಂಗ್ರೆಸ್ ಎದುರಿಗೆ ನಿಜವಾದ ಬಿಜೆಪಿ ಶಕ್ತಿ ಏನು ಎನ್ನುವುದನ್ನು ಈ ಚುನಾವಣೆಯಲ್ಲಿ ತೋರಿಸಿದ್ದೇವೆ ಎಂದರು.

ಉತ್ತರ ಕನ್ನಡ ಲೋಕ ಸಭಾ ಚುನಾವಣೆಯ ಸಂಚಾಲಕರಾದ ಗೋವಿಂದ ನಾಯ್ಕ ಮಾತನಾಡಿ, 2019 ರಲ್ಲಿ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಹುಮತ ಪಡೆದ ಕ್ಷೇತ್ರವಾಗಿತ್ತು. ನಿರಂತರವಾಗಿ 6 ಬಾರಿ ಲೋಕ ಸಭಾ ಕ್ಷೇತ್ರವನ್ನು ಈ ದೇಶಕ್ಕಾಗಿ ಕೊಟ್ಟಂತ ಕ್ಷೇತ್ರ ನಮ್ಮದಾಗಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಬದಲಾವಣೆಯಾದ ವೇಳೆ ನಮಲ್ಲಿ ಏನೋ ಆತಂಕವಿತ್ತು. ಆದರೆ ಕಾರ್ಯಕರ್ತರ ಪರಿಶ್ರಮ ಮತ್ತು ಮತದಾರರು ಈ ದೇಶ ಪ್ರೇಮಿ ಕಾರ್ಯಕರ್ತರು ಮತ್ತೊಮ್ಮೆ ಈ ಉತ್ತರ ಕನ್ನಡ ಕ್ಷೇತ್ರವನ್ನು ಕರ್ನಾಟಕದ 28 ಲೋಕಸಭಾ ಕ್ಷೇತ್ರಕ್ಕೆ ಅತಿ ಹೆಚ್ಚು ಮತವನ್ನು ಕೊಟ್ಟುಆಯ್ಕೆ ಮಾಡಿದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು
ನಾವೆಲ್ಲ ಕಾರ್ಯಕರ್ತರು ಒಮ್ಮತದಿಂದ ಚುನಾವಣೆ ಎದುರಿಸಿದರೆ ಗೆಲುವು ಸಾಧ್ಯ ಎನ್ನುವುದು ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕಾರ್ಯಕರ್ತ ಬಂಧುಗಳು ನಮಗೆ ತೋರಿಸಿಕೊಟ್ಟಿದ್ದಾರೆ. ಅದಕ್ಕಾಗಿ ನನ್ನೆಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ವಿಶ್ವೇಶ್ವರ ಹೆಗಡೆ ಕಾಗೇರಿ 6 ಬಾರಿ ಶಾಸಕರಾಗಿ ಶಿಕ್ಷಣ ಸಚಿವರಾಗಿ ವಿಧಾನಸಭೆಯ ಸ್ಪೀಕರ್ ಆಗಿ ಇಡೀ ರಾಜ್ಯಕ್ಕೆ ಚಿರಪರಿಚತರಾಗಿದ್ದಾರೆ. ಇವರು ಈ ಬಾರಿ ನಮ್ಮ ಕ್ಷೇತ್ರದ ಲೋಕ ಸಭಾ ಸದಸ್ಯರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ಮಾಜಿ ಸಚಿವ ಶಿವಾನಂದ ನಾಯ್ಕ ರಾಜ್ಯದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ನಮಗೆ ಹೆಮ್ಮೆ ತಂದಿದೆ . ನಮ್ಮ ಜಿಲ್ಲೆಗೆ ಮೋದಿಯವರ ಆಗಮನವಾದ ಬಳಿಕ ಬಿಜೆಪಿಗೆ ಇನ್ನಷ್ಟು ಆನೆ ಬಲ ಸಿಕ್ಕಂತಾಯಿತು. ಈ ಗೆಲುವು ಕಾರ್ಯಕರ್ತರ ಗೆಲುವು ಹಾಗೂ ಮೋದಿಗೆ ಸಿಕ್ಕ ಗೆಲುವಾಗಿದೆ. ಈ ಚುನಾವಣೆಯನ್ನು ದಿಕ್ಸೂಚಿಯನ್ನಾಗಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿಯೂ ಗೆಲುವು ಸಾಧಿಸೋಣ ಎಂದ ಅವರು ಗ್ಯಾರಂಟಿ ಭಾಗ್ಯದಿಂದ ಕಾಂಗ್ರೆಸ್ ಶಾಸಕರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆದು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರೋಣ ಎಂದು ಹೇಳಿದರು.

ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ ಪಕ್ಷ ವಿರೋಧಿ ಮಾಡುವವರಿಗೆ ಯಾವುದೇ ಅಧಿಕಾರ ನೀಡಬೇಡಿ, ಅವರನ್ನು ದೂರವಿಡಿ. ಕೆಲವರು ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ,  ವಿಧಾನ ಸಭಾ ಚುನಾವಣೆ ಬಂತೆಂದರೆ ನಾನು ಕಾಂಗ್ರೆಸ್ ಪಾರ್ಟಿ ಸಪೋರ್ಟ್ ಮಾಡುತ್ತೇನೆ. ಲೋಕಸಭಾ ಚುನಾವಣೆ ಬಂದರೆ ನಾನು ಬಿಜೆಪಿ ಪಕ್ಷಕ್ಕೆ ಸಪೋರ್ಟ್ ಮಾಡುತ್ತೇನೆ ಎನ್ನುವ ಪಕ್ಷ ವಿರೋಧಿಗಳನ್ನು ಪಕ್ಷದಿಂದ ದೂರವಿಡಿ. ಭಟ್ಕಳದಲ್ಲಿ ಬಿಜೆಪಿ ಬೆಳೆಯಬೇಕು ಹಾಗೂ ಭಟ್ಕಳದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾರಬೇಕು ಎಂದು ವಿನಂತಿ ಮಾಡಿಕೊಂಡರು.

300x250 AD

ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿ ಈ ಬಾರಿಯ ಲೋಕ ಸಭಾ ಚುನಾವಣಾ ಗೆಲುವು ರಾಜ್ಯವೇ ಉತ್ತರ ಕನ್ನಡ ಜಿಲ್ಲೆಯನ್ನು ನೋಡುವಂತೆ ಮಾಡಿದೆ. ಈ ಗೆಲುವು ನಮ್ಮ ನಾಯಕರು, ಕಾರ್ಯಕರ್ತರು ಹಾಗೂ ಬೂತ್ ಗಳಿಗೆ ಬಂದು ಮತ ಹಾಕಿದ ನಮ್ಮ ಮತದಾರರಿಗೆ ಅರ್ಪಣೆ ಮಾಡಿದ್ದೇನೆ. ನಮ್ಮ ತಾಲೂಕಿನ ಹಳ್ಳಿ ಭಾಗಗಳಲ್ಲಿ ಈ ಬಾರಿ 95ಕ್ಕೂ ಹೆಚ್ಚು ಶೇಕಡಾ ಮತದಾನವಾಗಿದೆ. ಮತದಾರ ಮನಸ್ಸು ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತಿರುತ್ತದೆ. ಇದಕ್ಕಾಗಿ ಈ ಬಾರಿ ಲೋಕ ಸಭಾ  ಚುನಾವಣಾಗೆ ಮತ ಹಾಕಿದ ಮತದಾರರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ಮತ ಚಲಾಯಿಸುವಂತೆ ಮಾಡೋಣ ಎಂದು ಹೇಳಿದರು.

ಭಟ್ಕಳ ವಿಧಾನ ಸಭಾ ಕ್ಷೇತ್ರದ ಸಂಚಾಲಕರಾದ  ಡಾ. ಜಿ.ಜಿ ಹೆಗ್ಡೆ ಮಾತನಾಡಿ ನಮ್ಮ ಸಂಸದರು ಮುಂದಿನ ಲೋಕಸಭಾ ಸದನದಲ್ಲಿ ಮೋದಿಯವರಿಗೆ ಭಟ್ಕಳ ಮಲ್ಲಿಗೆ ಹಾರವನ್ನು ಹಾಕಿ, ಭಟ್ಕಳ ಮಲ್ಲಿಗೆಯನ್ನು ಇಂಟರ್‌ನ್ಯಾಷನಲ್ ಬ್ರಾಂಡ್ ಆಗಿ ಮಾಡಬೇಕು ಎಂದು ಸಂಸದರಲ್ಲಿ ವಿನಂತಿ ಮಾಡಿಕೊಂಡರು

ಬಳಿಕ ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿ ಭಟ್ಕಳ ತಾಲೂಕಿನಲ್ಲಿ ಐ.ಆರ್.ಬಿ ಕಂಪನಿಯವರು ರಸ್ತೆಯನ್ನು ಸಂಪೂರ್ಣವಾಗಿ ಹದಗೆಟ್ಟಿಸಿದ್ದಾರೆ ಹಾಗೂ ನಮ್ಮ ಜಿಲ್ಲೆಯಲ್ಲಿರುವ ಅರಣ್ಯ ಅತಿಕ್ರಮಣವನ್ನು ಸರಿಪಡಿಸುವಂತೆ ಕೋರಿಕೊಂಡರು.

ಇದಕ್ಕೂ ಪೂರ್ವದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೃತ ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಅಲ್ಲಿಂದ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಈಶ್ವರ ನಾಯ್ಕ, ಭಟ್ಕಳ ಮಂಡಲ ಪ್ರಭಾರಿ ಹೇಮಂತ ಗಾಂವ್ಕರ್,ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top