ಯಲ್ಲಾಪುರ: ಯಲ್ಲಾಪುರ ಆರಕ್ಷಕ ಠಾಣೆಗೆ ನೂತನವಾಗಿ ಆಗಮಿಸಿ, ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಸಿ.ಪಿ.ಐ. ರಮೇಶ ಹಾನಾಪುರ ಮತ್ತು ಪಿ.ಎಸ್.ಐ. ಸಿದ್ದು ಗುಡಿ ಅವರನ್ನು ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಪಟ್ಟಣದ ಆರಕ್ಷಕ ಠಾಣೆಯಲ್ಲಿ ಜು.೬ ರಂದು ಸನ್ಮಾನಿಸಿ, ಗೌರವಿಸಿದರು. ಪ್ರಮುಖರಾದ ವಿ.ಎಂ.ಹೆಗಡೆ, ನಾಗೇಂದ್ರ ಪತ್ರೇಕರ ಹುಲಿಮನೆ, ಗೋಪಾಲ ಹೆಗಡೆ ಜಾಗರಮನೆ, ಮಹಾಬಲೇಶ್ವರ ಗುಂಡಾನಜಡ್ಡಿ, ಪ್ರಶಾಂತ ಶಾಸ್ತ್ರಿ, ರತ್ನಾಕರ ಶೇಟ್, ಗಜಾನನ ಶಾಸ್ತ್ರಿ ತೋಳಗೋಡ, ಹಿತ್ಲಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ, ಮಂಜುನಾಥ ಶೇಟ್ ಪುರದಮನೆ ಮತ್ತಿತರರು ಉಪಸ್ಥಿತರಿದ್ದರು.
ನೂತನ ಸಿಪಿಐ,ಪಿಎಸ್‌ಐಗೆ ಗೌರವ ಸನ್ಮಾನ
