Slide
Slide
Slide
previous arrow
next arrow

ವಿವಿಧ ಬೇಡಿಕೆಗೆ ಆಗ್ರಹಿಸಿ ಮನವಿ ಸಲ್ಲಿಕೆ

300x250 AD

ಯಲ್ಲಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರ ಸಂಘದ ವತಿಯಿಂದ  ಶನಿವಾರ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

2006 ಪೂರ್ವದಲ್ಲಿ ನೇಮಕಾತಿ ಹೊಂದಿ ಪಿಂಚಣಿ ಇಲ್ಲದೇ ಸೇವೆ ಸಲ್ಲಿಸುತ್ತಿದ್ದೇವೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚುಜನ ಸರಕಾರದಿಂದ ಪಿಂಚಣಿ ದೊರೆಯದೇ ನಿವೃತ್ತರಾಗಿದ್ದಾರೆ. ಸಂಕಷ್ಟದಲ್ಲಿದ್ದಾರೆ. ಕಾರಣ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು. ಒಪಿಎಸ್ ಜಾರಿಗೆ ವಿಳಂಬವಾದಲ್ಲಿ  ಎನ್‌ಪಿಎಸ್ ಯಥಾವತ್ತಾಗಿ ಜಾರಿಗೊಳಿಸಿ,ಪ್ರಾಧಿಕಾರದ ಆಡಳಿತ ಮಂಡಳಿಯ ವಂತಿಗೆಯ ಬದಲು ಸರಕಾರವೇ ವಂತಿಗೆ ಬರಿಸಲು ಕ್ರಮ‌ ಕೈಗೊಳ್ಳಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಕಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅನುದಾನಿತ ನೌಕರಿಗೂ ಸರಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆ ಯಥಾವತ್ತಾಗಿ ಜಾರಿಗೊಳಿಸಬೇಕು. ಅನುದಾನಿತ ನೌಕರಿಗೆ ಯಾವುದೇ ತಾರತಮ್ಯ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಂಘಟನೆಯ ಪ್ರಮುಖರಾದ ಎಂ.ರಾಜಶೇಖರ, ಚಂದ್ರಶೇಖರ ಎಸ್. ಸಿ‌.,ಜಗದೀಶ ಭಟ್ಟ,ಎಂ.ಕೆ. ಭಟ್ಟ, ಪ್ರದೀಪ ನಾಯ್ಕ,ಕೆ.ಸಿ.ಮಾಳ್ಕರ್,ಪ್ರಸನ್ನ ಹೆಗಡೆ ಮುಂತಾದವರಿದ್ದರು.

300x250 AD

Share This
300x250 AD
300x250 AD
300x250 AD
Back to top