ಶಿರಸಿ: ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕು ಸಮಿತಿ, ಶಿರಸಿ ಶಿಕ್ಷಣ ಇಲಾಖೆ, ಶಿರಸಿ ಸಹಯೋಗದಲ್ಲಿ ಭಾರತ ಸೇವಾದಳ ಜಿಲ್ಲಾಕಛೇರಿ ಶಿರಸಿ ಇಲ್ಲಿ ತಾಲೂಕು ಮಟ್ಟದ ಶಿಕ್ಷಕ-ಶಿಕ್ಷಕಿಯರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಶಿಬಿರವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದ ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಯಾದ ಪ್ರಕಾಶ ತಾರಿಕೊಪ್ಪ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಚೈತನ್ಯ ಶಕ್ತಿಯು ಜಾಗರೂಕವಾಗಬೇಕಾದಲ್ಲಿ ಅವರಿಗೆ ಸರ್ವ ಅಂಗಗಳಿಗೆ ಚಟುವಟಿಕೆ ನೀಡಬೇಕು. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಲಭ್ಯತೆ ಕೆಲವೇ ಇದ್ದು ಅದಕ್ಕೆ ಪೂರಕವಾಗಿ ಸೇವಾದಳವು ಉತ್ತಮ ಕೆಲಸವನ್ನು ಮಾಡುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸೇವಾದಳ ತರಬೇತಿಯನ್ನು ನೀಡಬೇಕೆಂದು ಸಲಹೆ ನೀಡಿದರು.
ಕೇಂದ್ರ ಸಮಿತಿಯ ಸದಸ್ಯರಾದ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ ಇವರನ್ನು ಗೌರವಿಸಲಾಯಿತು. ಅವರು ಮಾತನಾಡುತ್ತ ವಿಶ್ವದ ಮಾತೆ ಗೋವು ನಾವು ಗೋವಿನಂತೆ ಸಹಕಾರ ಮನೋಭಾವನೆಯನ್ನು ಸದಾಕಾಲದಲ್ಲಿ ನಮ್ಮಲ್ಲಿರುವಂತೆ ನೋಡಿಕೊಳ್ಳಬೇಕು. ಗೋವುಗಳು ಮನುಷ್ಯನಂತಲ್ಲ ಅವು ತಾಜ್ಯ ವಸ್ತುಗಳನ್ನು ತಿಂದು ಪೂಜ್ಯ ವಸ್ತುಗಳನ್ನು ನೀಡುತ್ತದೆ. ಆದರೆ ಮನುಷ್ಯ ಇದರ ವಿರುದ್ಧ. ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆ, ಇಂತಹ ಉತ್ತಮ ಮೌಲ್ಯಗಳನ್ನು ಕಲಿಸಲು ಸೇವಾದಳ ಶಿಕ್ಷಕರು ನೀವು ಸಶಕ್ತರಾಗಿರುತ್ತೀರಿ ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಬಿ. ವಿ. ಗಣೇಶ ಇವರು ನಮ್ಮ ಶಾರೀರಿಕ ಚಲನೆಯಿಂದ ಬಂದ ಅನುಭವದ ಮೊತ್ತವನ್ನೆ ನಾವು ನಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಾವು ಆದರ್ಶ ಶಿಕ್ಷಕರಾಗುತ್ತೇವೆ. ಕಾಲಕಾಲಕ್ಕೆ ನಮ್ಮನ್ನು ಪುನಶ್ಚೇತನ ಗೊಳಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಭಾರತ ಸೇವಾದಳ ತಾಲೂಕಾ ಅಧ್ಯಕ್ಷರಾದ ಅಶೋಕ ಭಜಂತ್ರಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ರಾಜ್ಯ ಸರ್ಕಾರಿ ನೌಕರರಾದ ಜಿಲ್ಲಾ ಅಧ್ಯಕ್ಷ ಕಿರಣ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಪಟಗಾರ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ ಪಟಗಾರ ಸೇವಾದಳ ಶಿಬಿರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ತಾಲೂಕು ಉಪಾಧ್ಯಕ್ಷೆ ಶ್ರೀಮತಿ ವೀಣಾ ಭಟ್ಟ, ಕೋಶಾಧ್ಯಕ್ಷ ಕುಮಾರ ನಾಯ್ಕ, ಸದಸ್ಯರಾದ ಕೆ. ಎನ್. ನಾಯ್ಕ, ಶ್ರೀ ಸತೀಶ ಹೆಗಡೆ, ಹಿರಿಯ ಕ್ರೀಡಾಪಟು ಪಿ. ಎನ್. ಜೋಗಳೇಕರ ಉಪಸ್ಥಿತರಿದ್ದರು. ಶಿಕ್ಷಕ ಶಿಕ್ಷಕಿಯರಿಗೆ ಸಾಬಿನಯ ಗೀತೆ, ದೈಹಿಕ ತರಬೇತಿ, ಯೋಗ, ಪ್ರಾಣಾಯಾಮಗಳನ್ನು ರಾಮಚಂದ್ರ ಹೆಗಡೆ, ಉದಯಕುಮಾರ ಹೆಗಡೆ, ಸುಧಾಮ ಪೈ ತರಬೇತಿ ನೀಡಿದರು.
ಆರೋಗ್ಯ ಇಲಾಖೆಯ ಮಾನಸಿಕ ತಜ್ಞೆ ಡಾ. ಮಧುಮಿತಾ ಎನ್. ಎಸ್. ಮಾನಸಿಕ ಆರೋಗ್ಯ ಮತ್ತು ನಿರ್ವಹಣೆ ಬಗ್ಗೆ ಮಾದಕ ವ್ಯಸನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸಮಿತಿ ಸದಸ್ಯೆ ಶ್ರೀಮತಿ ಸಾವಿತ್ರಿ ಭಟ್ಟ, ತಾಲೂಕಾ ಸಂಘಟಕ ಸರ್ವೇಶ್ವರ ಶೆಟ್ಟಿ, ವಿ. ಜಿ. ಹೆಗಡೆ, ಎನ್. ಎಂ. ಹೆಗಡೆ, ಶ್ರೀಮತಿ ದಾಕ್ಷಾಯಣಿ ಕೊಡಿಯಾ ನೋಂದಣಿಗೆ ಸಹಕರಿಸಿದರು.
ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉದಯ ಭಟ್ಟ ಸರ್ವರನ್ನು ಸ್ವಾಗತಿಸಿದರು. ರಾಮಚಂದ್ರ ಹೆಗಡೆ ಜಿಲ್ಲಾ ಸಂಘಟಕರು ಪ್ರಾಸ್ತಾವಿಕ ನುಡಿದರು. ಉದಯಕುಮಾರ ಹೆಗಡೆ ನಿರೂಪಿಸಿದರೆ, ಕುಮಾರ ನಾಯ್ಕ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.