ಶಿರಸಿ: ಇದೇ ಜು. 13 ಶನಿವಾರ ಸಂಜೆ 6.30 ಘಂಟೆಗೆ ಸ್ಥಳೀಯ ಟಿ.ಎಮ್.ಎಸ್. ಸಭಾಭವನದಲ್ಲಿ ಶಿರಸಿ ರೋಟರಿಯ 2024-25ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆಯ ಸಾರ್ವಜನಿಕ ಸಮಾರಂಭ ಏರ್ಪಡಿಸಲಾಗಿದೆ.
ಶಿರಸಿಯಲ್ಲಿ ಐತಿಹಾಸಿಕ ಎನ್ನಬಹುದಾದ ಪ್ರಪ್ರಥಮ ಮಹಿಳಾ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಡಾ. ಸುಮನ್ ಮತ್ತು ಸರಸ್ವತಿ ಎನ್. ರವಿ ಉಳಿದ ಪದಾಧಿಕಾರಿಗಳೊಂದಿಗೆ ಸೇವಾದೀಕ್ಷೆ ಪಡೆಯಲಿದ್ದು ರೋ.ಅಂ. ಜಿಲ್ಲೆ 3181ರ ನಿಕಟಪೂರ್ವ ಪ್ರಾಂತಪಾಲ, ಮೈಸೂರಿನ ಕೇಶವ ಎಚ್.ಆರ್. ಪದಗ್ರಹಣಾಧಿಕಾರಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಹಾಯಕ ಪ್ರಾಂತಪಾಲರಾದ ಕಾರವಾರದ ರಾಘವೇಂದ್ರ ಪ್ರಭು ಅತಿಥಿಗಳಾಗಿ ಭಾಗವಹಿಸಲಿರುವುದಾಗಿ ಶಿರಸಿ ರೋಟರಿಯ ನಿಕಟಪೂರ್ವ ಅಧ್ಯಕ್ಷ, ಕಾರ್ಯದರ್ಶಿಗಳಾದ ಶ್ರೀಧರ ಹೆಗಡೆ ಮತ್ತು ಗಣಪತಿ ಹೆಗಡೆ ಹಾಗೂ 2023-24ರ ರೋಟರಿ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.