ದಾಂಡೇಲಿ: ನಗರದ ಇನ್ನರ್ವೀಲ್ ಕ್ಲಬ್ಬಿನ ಅಧ್ಯಕ್ಷರಾಗಿ ಸ್ನೇಹಲ್ ಕಂಬದಕೋಣೆ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ನಾಯಕವಾಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕ್ಲಬ್ಬಿನ ಉಪಾಧ್ಯಕ್ಷರಾಗಿ ಸುನೀತಾ ಶೇಖರಪ್ಪ, ಖಜಾಂಚಿಯಾಗಿ ಭಾರತಿ ಅಜೀತ್ ನಾಯಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕ್ಲಬಿನ ಅಂತರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕಿಯಾಗಿ ಡಾ.ಅನುಷಾ ಮಾಡ್ದೋಳ್ಕರ್ ಮತ್ತು ಇನ್ನರ್ ವೀಲ್ ಕ್ಲಬಿನ ಎಡಿಟರ್ ಆಗಿ ಬೀಬಿ ಸೋಗ್ರಾ ಅವರು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇದೇ ಬರುವ ಜು.4, ಗುರುವಾರ ಸಂಜೆ 6 ಗಂಟೆಗೆ ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ನಡೆಯಲಿದೆ.