ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ರಾಜ್ಯ ಮಟ್ಟದ ಕರಾಟೆ ರೆಫ್ರಿ ತರಬೇತಿ ಶಿಬಿರ ದಿ ನ್ಯೂ ಇಂಗ್ಲೀಷ್ ಸ್ಕೂಲ್ ನ ಕಮಲಾವತಿ ರಾಮನಾಥ ಶಾನಬಾಗ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ೨೦ ನಿರ್ಣಾಯಕರು ಮತ್ತು ೫೦ ಕರಾಟೆ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ವಿಭಾಗದಲ್ಲಿ ದೈಹಿಕ ಕರಾಟೆ ಶಿಕ್ಷಕಿಯಾಗಿ ಸೀಮಾ ಈಶ್ವರ ರಾಜ್ಯ ಮಟ್ಟದ ಕರಾಟೆ ರೆಫ್ರಿ ತರಬೇತಿಯಲ್ಲಿ ಭಾಗವಹಿಸಿದ್ದರು. ಭಟ್ಕಳದ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕಿ ಸೀಮಾ ಈಶ್ವರ ನಾಯ್ಕ ಇದಕ್ಕಾಗಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸರ್ಟಿಫಿಕೇಟ್ ಪಡೆದಿದ್ದಾರೆ. ಸೀಮಾ ನಾಯ್ಕ ಅವರಿಗೆ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಶ್ರೀ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ರೂಪಾ ರಮೇಶ ಖಾರ್ವಿ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ರೆಫ್ರಿ ಚೇರ್ಮನ್ ಹಾಗೂ ವರ್ಲ್ಡ್ ಕರಾಟೆ ಫೆಡರೇಶನ್ ರೆಫ್ರಿ ಕೆ.ಪಿ ಜೋಶ್, ಉತ್ತರಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಧ್ಯಕ್ಷ ಅರವಿಂದ ನಾಯಕ, ಪತ್ರಕರ್ತ ಮೋಹನ ನಾಯ್ಕ, ಮುಖ್ಯೋಪಾಧ್ಯಾಯನಿ ರೂಪಾ ರಮೇಶ ಖಾರ್ವಿ, ಕಾನೂನು ಸಲಹೆಗಾರ ಮನೋಜ್ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಯ್ಕ ಇದ್ದರು. ನಾಗಶ್ರೀ ನಾಯ್ಕ ನಿರ್ವಹಿಸಿದರು.