ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿಯಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಗುಡ್ಡ ಕುಸಿತವಾದ ಸಮಯದಿಂದ ಮಧ್ಯರಾತ್ರಿ ಆಗುತ್ತಾ ಬಂದರೂ ಪೊಲೀಸರೇ ಒದ್ದಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು ಬಿಟ್ಟರೆ, ತಾಲೂಕಾ ಆಡಳಿತ ಅಧಿಕಾರಿಗಳು ಘಟನಾ ಸ್ಥಳದ ಹತ್ತಿರ ಒಬ್ಬರು ಬರಲಿಲ್ಲ. ಇಂತಹ ಸಮಯದಲ್ಲಿ ಪ್ರಕೃತಿ ವಿಕೋಪ ಕಾರ್ಯಾಚರಣೆಯ ತಂಡ ಎಲ್ಲಿ ಹೋಯಿತು, ಬೆಳಿಗ್ಗೆ ಬಂದು ಕಾರ್ಯಾಚರಣೆ ಮಾಡುವುದಾದರೆ, ಪ್ರಕೃತಿ ವಿಕೋಪ ಕಾರ್ಯಾಚರಣೆಗೆ ಅನುದಾನ ಕೊಡುವುದು ಯಾಕೆ..? ಇಂತಹ ಸಮಯದಲ್ಲಿ ಪೊಲೀಸ್ ಇಲಾಖೆ ಮಾತ್ರ ಕಾರ್ಯಾಚರಣೆ ಮಾಡಬೇಕೆ..? ತುರ್ತು ಕಾರ್ಯಾಚರಣೆ ಮಾಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯವರು, ಉಪವಿಭಾಗಾಧಿಕಾರಿಗಳು ತಕ್ಷಣ ತುರ್ತು ಕಾರ್ಯಾಚರಣೆಗೆ ಆದೇಶ ಮಾಡಬೇಕಿದೆ. ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.