ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಬಾಸ್ಕೆರಿಯಲ್ಲಿ ರಸ್ತೆ ಅಂಚಿನ ಗುಡ್ಡ ಕುಸಿತವಾಗಿ ದೊಡ್ಡ ಬಂಡೆ ಕಲ್ಲು ರಸ್ತೆಗೆ ಬಂದು ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಅರ್ಧ ರಸ್ತೆಗೆ ಬಂಡೆ ಕಲ್ಲು ಬಿದ್ದಿರುವುದರಿಂದ ಒಂದು ಕಡೆಯಿಂದ ಮಾತ್ರ ವಾಹನ ಸಂಚಾರ ಮಾಡುತ್ತಿದೆ. ಗುಡ್ಡ ಮತ್ತೆ ಕುಸಿಯುವ ಸಾಧ್ಯತೆ ಇರುವ ಬಗ್ಗೆ ಸ್ಥಳೀಯ ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.