Slide
Slide
Slide
previous arrow
next arrow

ಹೈನುಗಾರರ ಬದುಕನ್ನು ಹೊನ್ನಾಗಿಸುವ ಹಾದಿಯಲ್ಲಿ ‘ಸುರೇಶ್ಚಂದ್ರ ಕೆಶಿನ್ಮನೆ’

300x250 AD

ಹತ್ತು ವರ್ಷದಲ್ಲಿ ಎರಡು ಪಟ್ಟಾದ ಅಭಿವೃದ್ಧಿ ಕಾರ್ಯ | ಜನಾನುರಾಗಿ ನಾಯಕತ್ವಕ್ಕೆ ಜನತೆಯ ಶ್ಲಾಘನೆ

ಶಿರಸಿ: ಸಾಮಾಜಿಕ ವಲಯದಲ್ಲಿ ಇರುವ ವ್ಯಕ್ತಿಗೆ ಸಮಾಜದ ಬಗ್ಗೆ ಕಳಕಳಿ, ಕೆಲಸದ ಕುರಿತು ಬದ್ಧತೆ, ಜನತೆಯ ಕುರಿತು ಅಪರಿಮಿತ ಪ್ರೀತಿ ಇದ್ದಾಗ ಸಹಜವಾಗಿ ಆ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತದೆ. ಅಲ್ಲೊಂದು ಧನಾತ್ಮಕ ಬದಲಾವಣೆ ತಾನಾಗಿಯೇ ಸಮಾಜದಲ್ಲಿ ಕಂಡುಬರುತ್ತದೆ. ಇಂತಹ ಅಪರೂಪದ ವ್ಯಕ್ತಿಗಳಲ್ಲಿ ಧಾರವಾಡ ಹಾಲು ಒಕ್ಕೂಟದ ಹಾಲಿ ನಿರ್ದೇಶಕರು, ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗು ಕೆಡಿಸಿಸಿ ಬ್ಯಾಂಕ್ ಇದರ ನಿರ್ದೇಶಕರಾಗಿರುವ ಸುರೇಶ್ಚಂದ್ರ ಕೆಶಿನ್ಮನೆ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು.

ಸ್ವತಃ ಹೈನುಗಾರರಾಗಿ ರೈತರ ಕಷ್ಟ-ಕಾರ್ಪಣ್ಯಗಳ ಅರಿವಿದ್ದ ವ್ಯಕ್ತಿಯೋರ್ವರಿಗೆ ಒಕ್ಕೂಟದ ನಿರ್ದೇಶಕರಾಗಲು ಸಮಾಜ ಅವಕಾಶ ಮಾಡಿಕೊಟ್ಟಾಗ, ಅಲ್ಲಿಯ ವಿಶೇಷ ಅನುಕೂಲಗಳು ಆ ವಲಯದ ರೈತರಿಗೇ ಮೊದಲ ಆದ್ಯತೆಯ ಮೇಲೆ ದೊರೆಯುತ್ತದೆ. ಏಕೆಂದರೆ ಸ್ವತಃ ರೈತರಾಗಿ ಅನುಭವಿಸಿರುವ ಕಷ್ಟದ ಪರಿಚಯ ಆ ವ್ಯಕ್ತಿಗೆ ಇರುತ್ತದೆ.

ಕಳೆದೊಂದು ದಶಕದಿಂದ ಹೈನುಗಾರಿಕೆ ಕ್ಷೇತ್ರದಲ್ಲಿದ್ದುಕೊಂಡು, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾಗಿರುವ ಸುರೇಶ್ಚಂದ್ರ ಕೆಶಿನ್ಮನೆ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ, ಜನೋಪಯೋಗಿ ಕೆಲಸಗಳೇ ಅವರ ಸಾಧನೆಯ ಹಾದಿಯನ್ನು ತೋರಿಸುತ್ತದೆ.

ಕೆಶಿನ್ಮನೆ ಒಕ್ಕೂಟದ ನಿರ್ದೇಶಕರಾದ ನಂತರ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ

300x250 AD

ಸುರೇಶ್ಚಂದ್ರ ಕೆಶಿನ್ಮನೆ ಅವರು 10 ವರ್ಷಗಳ ಹಿಂದೆ ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆ ಆಗುವ ಮೊದಲು ಶಿರಸಿ ತಾಲೂಕಿನಲ್ಲಿ ಒಟ್ಟೂ 46 ಹಾಲು ಉತ್ಪಾದಕರ ಸಹಕಾರ ಸಂಘಗಳು 8 ರಿಂದ 10 ಸಾವಿರ ಲೀಟರ್ ನಷ್ಟು ಹಾಲು ಶೇಖರಣೆ ಮಾಡುತ್ತ ಕಾರ್ಯನಿರ್ವಹಿಸುತ್ತಿದ್ದವು. ಸುರೇಶ್ಚಂದ್ರ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆ ಆದ ನಂತರ ಒಟ್ಟೂ 45 ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ಥಾಪನೆಯಾಗಿ ಪ್ರಸ್ತುತ ಒಟ್ಟೂ 91 ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರತೀ ದಿನಕ್ಕೆ 16 ಸಾವಿರ ಲೀಟರ್‌ ನಷ್ಟು ಹಾಲು ಶೇಖರಣೆ ಮಾಡುತ್ತ ಕಾರ್ಯ ನಿರ್ವಹಿಸುತ್ತಿವೆ.

ಹೈನುಗಾರರಿಗೆ ಒಕ್ಕೂಟದಿಂದ ನೀಡಿರುವ ಮಾಹಿತಿಗಳು ಇಲ್ಲಿದೆ.

  1. ಒಟ್ಟೂ 53 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಯಂ ಚಾಲಿತ ಹಾಲು ಶೇಖರಣಾ ಘಟಕ ಶೇ.75 ರಷ್ಟು ಅನುದಾನದ ಅಡಿಯಲ್ಲಿ ವಿತರಿಸಲಾಗಿದೆ.
  2. ಒಟ್ಟೂ 15 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಖರ್ಚಿನಲ್ಲಿ ತೂಕದ ಯಂತ್ರ ನೀಡಲಾಗಿದೆ.
  3. ಒಟ್ಟೂ 10 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಒಕ್ಕೂಟದ ನಿರ್ದೇಶಕರ ಅನುದಾನದ ಅಡಿಯಲ್ಲಿ ಸ್ವಯಂ ಚಾಲಿತ ಹಾಲು ಕರೆಯುವ ಯಂತ್ರ ಕೊಡಲಾಗಿದೆ.
  4. ಒಟ್ಟೂ 967 ಸಂಖ್ಯೆಯ ರಬ್ಬರ್‌ ಮ್ಯಾಟ್ ಗಳನ್ನು ಅರ್ಹ ಹಾಲು ಉತ್ಪಾದಕರಿಗೆ ಶೇ.50 ರಷ್ಟು ಅನುದಾನದ ಅಡಿಯಲ್ಲಿ ವಿತರಣೆ ಮಾಡಲಾಗಿದೆ.
  5. ಒಟ್ಟೂ 23 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮೇವು ಕತ್ತರಿಸುವ ಯಂತ್ರ ಶೇ.75 ರಷ್ಟು ಅನುದಾನದ ಅಡಿಯಲ್ಲಿ ವಿತರಿಸಲಾಗಿದೆ.
  6. ಶಿರಸಿ ತಾಲೂಕಿನಲ್ಲಿ ನೂತನವಾಗಿ ಪ್ರಾರಂಭವಾಗುವ ಹಾಲು ಉತ್ಪಾದಕರ ಸಂಘಗಳಿಗೆ ಆರಂಭಿಕ ಉಪಕರಣ ಖರೀದಿಸಲು ತಲಾ ರೂ. 25,000/- ಗಳನ್ನು ಒಕ್ಕೂಟದ ನಿರ್ದೇಶಕರ ಅನುದಾನದಿಂದ ನೀಡಲಾಗಿದೆ.

ಕಲ್ಯಾಣ ಸಂಘದಿಂದ 5 ವರ್ಷದಲ್ಲಿ ಆರುಕಾಲು ಲಕ್ಷ ರೂಪಾಯಿ ವಿತರಣೆ:

ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಲ್ಯಾಣ ಸಂಘದ ಸದಸ್ಯರು ಮರಣ ಹೊಂದಿದರೆ, ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಕ್ಕಾಗಿ ಹಾಗೂ ಕಲ್ಯಾಣ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನಗಳಾಗಿ ಒಟ್ಟೂ ರೂ. 6 ಲಕ್ಷದ 25 ಸಾವಿರಗಳನ್ನು ಕಳೆದ 5 ವರ್ಷಗಳ ಅವಧಿಯಲ್ಲಿ ವಿತರಿಸಲಾಗಿದೆ.

Share This
300x250 AD
300x250 AD
300x250 AD
Back to top