ಕಾರವಾರ: ಜಾನುವಾರುಗಳಲ್ಲಿ ವೈರಸ್‌ನಿಂದ ಬರುವ ಚರ್ಮಗಂಟು ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾಧ್ಯತೆ ಇರುತ್ತದೆ. ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದ್ದು ಬಳಿಕ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ರೋಗ ಲಕ್ಷಣಗಳು ತೀವ್ರತರವಾಗಿದಲ್ಲಿ ಶೇ.2 ರಿಂದ 3ರಷ್ಟು ಜಾನುವಾರುಗಳು ಮರಣ ಹೊಂದುವ ಸಾಧ್ಯತೆಗಳು ಇರುತ್ತದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುನ್ನಚ್ಚೆರಿಕೆಯಾಗಿ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಜುಲೈ 20 ರವರೆಗೆ ಚರ್ಮಗಂಟು ರೋಗದ ವಿರುದ್ದ ಲಸಿಕೆ ಹಾಕುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಕಳೆದ ಬಾರಿ ಲಸಿಕೆ ಹಾಕಿಸಿದ್ದರೂ ಜಾನುವಾರು ಮಾಲೀಕರುಗಳು ಈ ಬಾರಿಯೂ ಸಹ ಇಲಾಖಾ ಅಧಿಕಾರಿಗಳು ಹಾಗೂ ಲಸಿಕೆದಾರರು ತಮ್ಮ ಮನೆಗೆ ಬಂದಾಗ ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಜಾನುವಾರುಗಳನ್ನು ಚರ್ಮಗಂಟು ರೋಗದಿಂದ ರಕ್ಷಿಸಲು ಸಹಕಾರ ನೀಡಬೇಕು. ಲಸಿಕೆ ಅಭಿಯಾನದ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸುವಂತೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.