Slide
Slide
Slide
previous arrow
next arrow

ನಿಸ್ವಾರ್ಥದಿಂದ ಸರ್ಕಾರಿ ಶಾಲೆ ಉಳಿವಿಗಾಗಿ ಸ್ವಂತ‌ ಜಾಗ ದಾನಗೈದ ದಂಪತಿ

300x250 AD

ಭಟ್ಕಳ: ಭೂಮಿಗಾಗಿ ಇಂದು ಗಲಾಟೆ ನಡೆಯುವ ಕಾಲದಲ್ಲಿ ಓರ್ವ ದಂಪತಿ ಯಾವುದೇ ಫಲಾಪೇಕ್ಷೆಯಿಲ್ಲದೇ ತನ್ನ ಖರೀದಿಯ ಜಾಗದಲ್ಲಿ ಸರಕಾರಿ ಶಾಲೆಯ ಉಳಿವಿಗಾಗಿ ಶಾಲೆಯ ನಿಗದಿತ 4.4 ಗುಂಟೆ ಜಾಗವನ್ನು ದಾನವಾಗಿ ನೀಡಿ ಜಾಗದ ಹೆಸರು ದಾಖಲಾತಿಯನ್ನು ಶಾಲಾ ಮುಖ್ಯಾಧ್ಯಾಪಕರಿಗೆ ವಿತರಿಸಿ ಎಲ್ಲರ ಪ್ರಶಂಸೆಗೆ ಕಾರಣವಾಗುವುದರೊಂದಿಗೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಜಾಗದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಅಹಿತಕರ ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ತಾಲೂಕಿನ ಬೆಳಕೆ ನೂಜ ಮಜಿರೆಯ ಹೆರ್ಬುಡ್ಕಿ ಸರಕಾರಿ ಶಾಲೆಯ ಉಳಿವಿಗಾಗಿ ಶಾಲೆಗೊಂದು ಸರಿಯಾದ ಜಾಗ ಇರಬೇಕೆನ್ನುವ ಉದ್ದೇಶ ಇಟ್ಟು ಶಾಲೆ ಸಹಿತ ಇದ್ದ ಭೂಮಿಯನ್ನು ಬೆಳಕೆಯ ಕಲಬಂಡಿಯ ಮಾದೇವ ನಾಯ್ಕ ದಂಪತಿಗಳು ತಮ್ಮ ಖರೀದಿಯ ಜಾಗದಲ್ಲಿ ಇದ್ದ ಶಾಲೆಯ ಭೂಮಿಯನ್ನು ಶಾಲೆಯ ಹೆಸರಿಗೆ ಪಹಣಿ ಮಾಡಿ ಮೊದಲಿನಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಇವರು ಈ ಭಾಗದ ಮಕ್ಕಳ ಭವಿಷ್ಯಕ್ಕೆ ಹಾಗೂ ಶಾಲೆಗೊಂದು ಅನುಕೂಲ ಮಾಡಿಕೊಟ್ಟಂತಾಗಿದೆ.

ತಾಲೂಕಿನ ಬೆಳಕೆ ಪಂಚಾಯತ ವ್ಯಾಪ್ತಿಯ ನೂಜ ಮಜಿರೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆರ್ಬುಡ್ಕಿ ಶಾಲೆಯು 1992ರಲ್ಲಿ ಆರಂಭಗೊಂಡಿದ್ದು ಅಲ್ಲಿಂದ ಕಳೆದ ಒಂದು ವರ್ಷದಿಂದೀಚೆಗೆ ಊರಿನ ಸ್ಥಳೀಯರೋರ್ವರ ಹೆಸರಿನಲ್ಲಿ ಶಾಲೆ ಸಹಿತ ಖಾಲಿ ಜಾಗವು ಇತ್ತು. ಅಲ್ಲಿಂದ ಸಾಕಷ್ಟು ಬಾರಿ ಖಾಸಗಿ ವ್ಯಕ್ತಿಗೆ ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ಶಾಲೆಯ ಜಾಗವನ್ನು ಪ್ರತ್ಯೇಕವಾಗಿ ಪಹಣಿ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು. ಆದರೆ ಕೆಲವೊಂದು ಕಾರಣದಿಂದಾಗಿ ಶಾಲೆಯ ಭೂಮಿಗೆ ಪ್ರತ್ಯೇಕ ಪಹಣಿ ಮಾಡಲು ಸಾಧ್ಯವಾಗಿಲ್ಲ.

ಈ ಶಾಲೆಯಲ್ಲಿ ಸದ್ಯಕ್ಕೆ 1ನೇ ತರಗತಿಯಿಂದ 5ನೇ ತರಗತಿಯ ತನಕ 25 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಯು ದಟ್ಟ ಕಾಡಿನಲ್ಲಿ ಶಾಲೆ ಇದೆ. ಹೆರ್ಬುಡ್ಕಿಯ ಶಾಲೆಯ ಜಾಗವು ಖಾಸಗಿ ವ್ಯಕ್ತಿಯ ಹೆಸರಿನಲ್ಲಿತ್ತು. ಶಾಲೆಯ ಪಕ್ಕದ ಮಾಲ್ಕಿ ಭೂಮಿಯನ್ನು ಕಲಬಂಡಿ ಮಾದೇವ ನಾಯ್ಕ ದಂಪತಿಗಳು ಖರೀದಿ ಮಾಡಿದ್ದರು. ಈ ವೇಳೆ ಇವರ ಖರೀದಿ ಜಾಗದಲ್ಲಿಯೇ ಶಾಲೆಯು ಒಳಗೊಂಡಿರುವುದು ಮಾದೇವ ನಾಯ್ಕ ಅವರ ಗಮನಕ್ಕೆ ಬಂತು. ಅದಾದ ಬಳಿಕ ಕುದ್ದು ಮಾದೇವ ನಾಯ್ಕ ಅವರೇ ಶಾಲೆ ಜಾಗದ ಪಹಣಿ ಪತ್ರ ಮಾಡಿಸಿಕೊಟ್ಟು ಮುಖ್ಯ ಶಿಕ್ಷಕಿಗೆ ದಾಖಲೆ ಪತ್ರವನ್ನು ಶಾಲೆಗೆ ತೆರಳಿ ಹಸ್ತಾಂತರಿಸಿದರು.

ಈ ಶಾಲೆಗೆ 1992 ರಿಂದ ಇಲ್ಲಿಯ ತನಕ ಅಂದರೆ 32 ವರ್ಷದ ಬಳಿಕ ಪಹಣಿ ಶಾಲೆಗೆ 2024 ರಲ್ಲಿ ಪಹಣಿ ಪತ್ರ ಮಾಡಿಕೊಟ್ಟ ಮಾದೇವ ನಾಯ್ಕ ಅವರ ಶಿಕ್ಷಣ ಪ್ರೇಮಕ್ಕೆ ಶಾಲಾ ಮುಖ್ಯ ಶಿಕ್ಷಕಿ ಅಫ್ರೀನ್ ಶೇಕ್ ಹಾಗೂ ಸಹ ಶಿಕ್ಷಕಿ ಸವಿತಾ ಎಚ್. ನಾಯ್ಕ ಮತ್ತು ಎಸ್.ಡಿ.ಎಮ್.ಸಿ ಹಾಗೂ ಊರ ನಾಗರಿಕರು ಧನ್ಯವಾದ ತಿಳಿಸಿದ್ದಾರೆ.

300x250 AD

‘ಶಿಕ್ಷಣದ ಬಗ್ಗೆ ಮಾದೇವ ನಾಯ್ಕ ಹಾಗೂ ದಂಪತಿಗಳು ಹೆಚ್ಚಿನ ಪ್ರಾಮುಖ್ಯತೆ ಇಟ್ಟುಕೊಂಡಿದ್ದಾರೆ. ನಾನು ಈ ಶಾಲೆಗೆ ಬಂದು 7 ವರ್ಷ ಆಗಿದ್ದು 32 ವರ್ಷದ ಹಳೆಯ ಶಾಲೆಗೆ ಇವರು ನಿಗದಿತ ಜಾಗಕ್ಕೆ ಪಹಣಿ ಪತ್ರ ಮಾಡಿಕೊಟ್ಟಿದ್ದಾರೆ. ಇದರಿಂದ ಇಷ್ಟು ದಿನ ಶಾಲೆಯ ಅಭಿವೃದ್ಧಿಗೆ ಪಹಣಿ ಪತ್ರ ಇಲ್ಲದಿರುವುದು ಕುಂಠಿತವಾಗುತ್ತಿತ್ತು. ಆದರೆ ಈಗ ಪಹಣಿ ಪತ್ರದಿಂದ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಅನೂಕೂಲವಾದಂತಾಗಿದೆ. ಇವರು 10 ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ್ದು ಕಲಿಕೆಯಲ್ಲಿ ಆಸಕ್ತಿ ಇದ್ದು ಮನೆಯ ಬಡತನದಿಂದ ವಿದ್ಯೆ ಮುಂದುವರೆಸುವುದು ಅವರಿಗೆ ಕಷ್ಟವಾಗಿತ್ತು. ಇದು ಅವರಿಗೆ ಈ ಶಾಲೆಗೊಂದು ಪ್ರತ್ಯೇಕ ಪಹಣಿ ಪತ್ರ ಮಾಡಿಕೊಟ್ಟರು. ಸಮಾಜದಲ್ಲಿ ಇವರು ಉದ್ಯಮಿಯಾಗಿದ್ದು ಈ ಕೆಲಸದಿಂದ ಅವರ ಜೀವನ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇನೆ.

–ಅಫ್ರೀನ್ ಶೇಕ್- ಶಾಲಾ ಮುಖ್ಯ ಶಿಕ್ಷಕಿ

Share This
300x250 AD
300x250 AD
300x250 AD
Back to top