ಶಿರಸಿ: ತಾಲೂಕಿನ ಹೊನ್ನೆಭಾಗ ಮುಂಡಿಗೆಜಡ್ಡಿ ಸೇತುವೆ ಕಳೆದ ನಾಲ್ಕಾರು ವರ್ಷಗಳಿಂದ ಕುಂಟೆ ಕಸಕಡ್ಡಿಗಳಿಂದ ಮುಚ್ಚಿಹೋಗಿದ್ದು ಮಳೆ ಬಂದಾಗ ಅನಾಹುತ ಸೃಷ್ಟಿಯಾಗುತ್ತಲಿತ್ತು. ಹಲವಾರು ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಇಲಾಖೆ ಇದಕ್ಕೆ ಸ್ಫಂದನೆ ನೀಡಿಲ್ಲವಾಗಿತ್ತು. ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ ಹೆಬ್ಬಾರರವರು ಸ್ವಯಂಪ್ರೇರಿತರಾಗಿ ತಮ್ಮ ತಂಡದೊಂದಿಗೆ ಹೋಗಿ ಸ್ವಚ್ಛಗೊಳಿಸಿ ಊರವರ ನೆಮ್ಮದಿಗೆ ಕಾರಣರಾಗಿದ್ದಾರೆ. ಈ ಭಾಗದ ಜನರು ಅವರನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ಹೆಬ್ಬಾರರಿಂದ ಸೇತುವೆ ಸ್ವಚ್ಛತೆ: ಶ್ಲಾಘನೆ
![](https://euttarakannada.in/wp-content/uploads/2024/06/IMG-20240616-WA0131-730x438.jpg)