Slide
Slide
Slide
previous arrow
next arrow

ಜನನ-ಜೀವನ-ಮರಣ ಈ ಮೂರು ಅವಸ್ಥೆಗಳು ಜೀವನದ ಸಿದ್ಧಾಂತ: ಡಾ.ಕೆ.ಪಿ.ಪುತ್ತೂರಾಯ

300x250 AD

ಶಿರಸಿ: ಇಲ್ಲಿನ ಮಾರಿಕಾಂಬಾ ನಗರದ ಹಾಲುಹೊಂಡದಲ್ಲಿ ಗೆಳೆಯರ ಬಳಗ ಶಿರಸಿ ಇವರ ಆಶ್ರಯದಲ್ಲಿ ಭಜನೆ ಮತ್ತು ದಾಸ ಸಾಹಿತ್ಯದಲ್ಲಿ ಜೀವನ ಸಿದ್ಧಾಂತಗಳು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಕೆ.ಪಿ.ಪುತ್ತುರಾಯ ಮಾತನಾಡಿದರು.

 ವಚನಗಳು, ದಾಸ ಸಾಹಿತ್ಯ  ವಿಶಾಲವಾದ ಜೀವನ ಸಿದ್ದಾಂತಗಳಾಗಿ ಇಂದಿಗೂ, ಎಂದಿಗೂ, ಎಂದೆಂದಿಗೂ ಸಾರ್ವಜನಿಕವಾಗಿ ಪ್ರಸ್ತುತವಾಗಿದೆ. ಆಧ್ಯಾತ್ಮದಿಂದ ಹಿಡಿದು ಅಂತರಾತ್ಮನವರೆಗಿನ ಭಕ್ತಿಯ ವಿವಿಧ ಮುಖಗಳು ಅನುಭವದಿಂದ ಅಮೃತ ಸಮಾನವಾದ ನುಡಿಗಳು  ಚಿಂತನ ಮಂಥನಕ್ಕೆ ಪುಷ್ಟಿಯಾಗಿ ಬದುಕಿನ ಜಂಜಾಟದ ಸಮಸ್ಯೆಗಳಿಗೆ ಉತ್ತರವಾಗಿದೆ; ಜನನ-ಜೀವನ-ಮರಣ ಈ ಮೂರು ಅವಸ್ಥೆಗಳು ಬದುಕಿನ ಸಿದ್ದಾಂತವಾಗಿದೆ. ಜೀವನವೆಂದರೆ ಒಂದು ಅರ್ಥದಲ್ಲಿ ಕಣ್ಣು ತೆರೆದು ಮುಚ್ಚುವ ಕ್ಷಣವಾಗಿದೆ. ನಮ್ಮ ಬದುಕು ನಮ್ಮ ಕೈಯಲ್ಲಿದೆ, ಈ ಜೀವನವೆನ್ನುವದು ಆ ಭಗವಂತ ಕರುಣಿಸಿದ ದಿವ್ಯ ಕಾಣಿಕೆಯಾಗಿದೆ. ಇದು ನಮ್ಮ ಪಾಲಿನ ಸವಿಯನ್ನು ಸವಿಯಲಿಕ್ಕಾಗಿದೆಯೇ ಹೊರತು ಸವೆಯಲು ಅಲ್ಲವೇ ಅಲ್ಲ ಅನ್ನುವದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಮುಂದುವರಿಯಬೇಕು.ಬಾಹ್ಯ ಸ್ನಾನಕ್ಕಿಂತ ಅಂತರಂಗದ ಸ್ನಾನವೇ ಮುಖ್ಯ.ನಮ್ಮ ಜೀವನ ಗುಣದ ತೊಟ್ಟಿಲಾಗಬೇಕು, ಕಸದ ತೊಟ್ಟಿಲಾಗಬಾರದು. ಸಕಾಮ, ನಿಷ್ಕಾಮ, ಶರತ್ತು ಬದ್ದ ಕಾಮನೆಗಳಲ್ಲಿ ಭಗವಂತನಿಗೆ ಪ್ರಿಯವಾದದ್ದು ನಿಷ್ಕಾಮ ಕರ್ಮವಾಗಿದೆ. ಭಗವಂತ ವ್ಯಕ್ತಿ ಸ್ವರೂಪನಾಗಿರದೆ,ಚೈತನ್ಯಮಯ ಶಕ್ತಿ ಸ್ವರೂಪನಾಗಿದ್ದಾನೆ. ನಂಬಿದವರಿಗೆ ಕಲ್ಲು ಕೂಡ ದೇವರೇ, ನಂಬದವರಿಗೆ ದೇವರು ಕೂಡ ಕಲ್ಲೆಂದು ಖ್ಯಾತ ಶಿಕ್ಷಣ ತಜ್ಞ, ಸಾಹಿತಿ, ಚಿಂತಕ, ಶ್ರೇಷ್ಠ ವಾಗ್ಮಿ ಗಳಾದ ಡಾ.ಕೆ.ಪಿ.ಪುತ್ತೂರಾಯರು ವ್ಯಕ್ತಪಡಿಸಿದರು.

 ಮುಂದುವರೆದು ಮಾತನಾಡುತ್ತಾ ಅವರು ದಾಸರು ಅಂದರೆ ಅವರೇ ಪುರಂದರದಾಸರು, ಕನಕದಾಸರು ತುಳಸಿದಾಸರು ಇನ್ನೂ ಅನೇಕ ಪ್ರಾತ:ಸ್ಮರಣೀಯರು. ದಾಸರುಗಳ ಅನುಭವದ ರಸಪಾಕವೇ ಬದುಕಿನ ಸಾರವಾಗಿದೆ; ಈ ದಾಸರುಗಳೆಲ್ಲ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿ ಪ್ರಾತ:ಸ್ಮರಣೆಯರಾದರು; ದಾಸ ಸಾಹಿತ್ಯ ಬೆಟ್ಟದಂತೆ ಬೆಳೆದಿದೆ ಎಂದು ಮನಮುಟ್ಟುವಂತೆ ದಾಸರ ಪದಗಳನ್ನು ಉಲ್ಲೇಖಿಸಿ ತಮ್ಮ ಎಂದಿನ ಹಾಸ್ಯ ಭರಿತ ಮಾತುಗಳಿಂದ ನಗೆಗಡಲಲ್ಲಿ ತೇಲಿಸಿ ಮನೋಜ್ನವಾದ ಉಪನ್ಯಾಸ ನೀಡಿದರು.

ಆರಂಭದಲ್ಲಿ ಗಾನ ಸಿಂಚನ ಭಜನಾ ಮಂಡಳಿ ಕೆರೆಕೈ ಹಳದೋಟ ಇವರು ಭಕ್ತಿರಸ ಪ್ರಧಾನವಾದ ಹಾಡುಗಳನ್ನು ತಮ್ಮ ಸುಮಧುರವಾದ ಕಂಠಸಿರಿಯಿಂದ ಪ್ರಸ್ತುತಪಡಿಸಿ ಸಭಿಕರ ಮನಸ್ಸನ್ನು ಗೆದ್ದರು. ಈ ಭಜನಾ ಕಾರ್ಯಕ್ರಮದಲ್ಲಿ ಕವಿತಾ ಭಟ್, ನಯನಾ ಹೆಗಡೆ, ಚಿತ್ರಾ ಹೆಗಡೆ, ಸಹನಾ ಭಟ್, ಅನಿತಾ ಹೆಗಡೆ, ಶೋಭಾ ಹೆಗಡೆ,ಕಲಾವತಿ ಹೆಗಡೆ,ವಿದ್ಯಾ ಹೆಗಡೆ, ಅಶ್ವಿನಿ ಜೋಷಿ ತೆರಕನಹಳ್ಳಿ ಭಾಗವಹಿಸಿದ್ದರು. 

300x250 AD

ಪ್ರೊ.ಡಿ ಎಂ ಭಟ್ಟ ಕುಳವೆ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಲೇಖಕಿ ತಾರಾ ಹೆಗಡೆ ಅತಿಥಿಗಳ, ಕಲಾವಿದರ ಪರಿಚಯವನ್ನು ಸುಂದರವಾಗಿ ಮಾಡಿದರು.

ಇದೇ ಸಂದರ್ಭದಲ್ಲಿ ಎಂ.ಎಸ್. ಹೆಗಡೆ,ಕರ್ಕಿ ಹಾಗೂ ದೇಶಪಾಂಡೆ ದಂಪತಿಗಳು ಡಾ.ಕೆ ಪಿ ಪುತ್ತೂರಾಯ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದರು. ಇಂದಿರಾ ಬೈಲಕೇರಿಯವರು ಗೌರವ ಸಮರ್ಪಿಸಿ ವಂದಿಸಿದರು. 

 ಕಾರ್ಯಕ್ರಮದಲ್ಲಿ ಬಿ.ಡಿ.ಕಾರಂತ್, ಎಸ್.ಪಿ. ಧಾರೇಶ್ವರ, ಪ್ರೊ.ಕೆ.ಎನ್. ಹೊಸಮನಿ,ಬಿ.ಕೆ. ಹೆಗಡೆ, ಗುರುಪಾದ ಹೆಗಡೆ, ಕವಿ ಲಕ್ಷ್ಮಣ ಶಾನಭಾಗ, ಕವಿ ಮಂಜುನಾಥ ಹೆಗಡೆ ಹೂಡ್ಲಮನೆ ದಂಪತಿಗಳು, ನಾಗೇಂದ್ರ ಮಾರ್ಕಾಂಡೆ ದಂಪತಿಗಳು ಮುಂತಾದ ಗಣ್ಯರು ಉಪಸ್ಥಿತರಿದ್ದರು. ವಿಶ್ವೇಶ್ವರ ಗಾಯತ್ರಿ ವಂದಿಸಿದರು.

Share This
300x250 AD
300x250 AD
300x250 AD
Back to top