Slide
Slide
Slide
previous arrow
next arrow

ನಿವೃತ್ತಿಗೊಂಡ ಶಿಕ್ಷಕಿ ರಜಿಯಾ ಶೇಖ್‌ಗೆ ಬೀಳ್ಕೊಡುಗೆ

300x250 AD

ದಾಂಡೇಲಿ: ಶಿಕ್ಷಣ ಇಲಾಖೆಯಲ್ಲಿ ಕಳೆದ 39 ವರ್ಷಗಳಿಂದ ಶಿಕ್ಷಕಿಯಾಗಿ ಅನುಪಮ ಸೇವೆಯನ್ನು ಸಲ್ಲಿಸಿ, ಕಳೆದ 18 ವರ್ಷಗಳಿಂದ ನಗರದ ಪಟೇಲ್ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿ, ನಿವೃತ್ತರಾದ ಶಿಕ್ಷಕಿ ರಜಿಯಾ ಶೇಖ್ ಅವರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

1985ರಲ್ಲಿ ಹಳಿಯಾಳದಲ್ಲಿ ಶಿಕ್ಷಕಿ ವೃತ್ತಿಯನ್ನು ಆರಂಭಿಸಿ ಅಲ್ಲಿ 4 ವರ್ಷ ಸೇವೆಯನ್ನು ಸಲ್ಲಿಸಿದ ನಂತರ ದಾಂಡೇಲಿಯ ಬಂಗೂರನಗರ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 17 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ಆನಂತರ ಪಟೇಲ್ ನಗರದ ಸ.ಕಿ.ಪ್ರಾ. ಉರ್ದು ಶಾಲೆಯಲ್ಲಿ 18 ವರ್ಷಗಳ ಕಾಲ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ರಜಿಯಾ ಶೇಖ್ ಅವರು ನಿವೃತ್ತರಾಗಿದ್ದಾರೆ.

ನಿವೃತ್ತರಾದ ರಜಿಯಾ ಶೇಖ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು‌. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆಯ ಸದಸ್ಯೆ ಯಾಸ್ಮಿನ್ ಕಿತ್ತೂರು ಅವರು ರಜಿಯಾ ಶೇಖ ಅವರು ಒಬ್ಬ ಪ್ರಾಮಾಣಿಕ ಶಿಕ್ಷಕಿಯಾಗಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ಬೆಳಕನ್ನು ನೀಡಿದ ಗುರುಮಾತೆಯಾಗಿದ್ದಾರೆ‌. ಮಾತೃ ವಾತ್ಸಲ್ಯದಿಂದ ವಿದ್ಯಾರ್ಥಿಗಳನ್ನು ಬೆಳೆಸಿದ ರಜಿಯಾ ಶೇಖ್ ಅವರ ಸೇವಾ ಮನೋಭಾವನೆ, ಪ್ರಾಮಾಣಿಕತೆ ಸದಾ ಸ್ಮರಣೀಯ ಮತ್ತು ಮಾದರಿಯಾಗಿದೆ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ ಅವರು ಮಾತನಾಡಿ ರಜಿಯಾ ಶೇಖ್ ಅವರು ನಮಗೆಲ್ಲಾ ಹಿರಿಯ ಸಹೋದರಿಯಾಗಿ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದವರು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಪ್ರೀತಿಗೆ ಪಾತ್ರರಾದ ಅವರು ಸೇವೆಯನ್ನು ಸಲ್ಲಿಸಿದ ಶಾಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರು ಎಂದರು.

ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸುಲೇಮಾನ್ ಶೇಖ್ ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ರಜಿಯಾ ಶೇಖ ಅವರು ಹಲವಾರು ತನ್ನದೇ ಆದ ರೀತಿಯ ಚಟುವಟಿಕೆಗಳ ಮೂಲಕ ಉತ್ತಮ ಶಿಕ್ಷಕಿಯಾಗಿ ಗಮನ ಸೆಳೆದವರು. ಕಳೆದ 39 ವರ್ಷಗಳ ಸುದೀರ್ಘ ಅವರ ಸೇವೆ ಅದು ಅತ್ಯಂತ ಸಾರ್ಥಕವಾದ ಸೇವೆ ಎಂದು ಹೇಳಿ ನಿವೃತ್ತರ ಜೀವನಕ್ಕೆ ಶುಭವನ್ನು ಹಾರೈಸಿದರು.

300x250 AD

ಮುಖ್ಯ ಅತಿಥಿಗಳಾಗಿ ಜೋಯಿಡಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ, ಶಿಕ್ಷಕರ ಸಂಘದ ಉದಯ ನಾಯ್ಕ, ಪ್ರವೀಣ್ ನಾಯ್ಕ, ವೆಂಕಟೇಶ್ ನಾಯ್ಕ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅಬ್ದುಲ್ ರೆಹಮಾನ್ ಸಿ.ಆರ್.ಪಿಗಳಾದ ಲಲಿತಾ ಗೌಡ ಮತ್ತು ಶ್ರೀದೇವಿ ಪುಲಿ ಮೊದಲಾದವರು ಭಾಗವಹಿಸಿ ರಜಿಯಾ ಶೇಖ್ ಅವರ ನಿವೃತ್ತ ಜೀವನಕ್ಕೆ ಶುಭವನ್ನು ಹಾರೈಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಜಿಯಾ ಶೇಖ್ ಅವರು ನನಗೆ ಅತ್ಯಂತ ಪವಿತ್ರವಾದ ಸೇವೆಯನ್ನು ಸಲ್ಲಿಸಿದ ಹೆಮ್ಮೆ ಮತ್ತು ಗೌರವ ಇದೆ. ವಿದ್ಯಾರ್ಥಿಗಳು ನೀಡಿದ ಪ್ರೀತಿ, ಶಿಕ್ಷಕ ವೃಂದ ಹಾಗೂ ಶಿಕ್ಷಕರ ಸಂಘದವರು ನೀಡಿದ ಸಹಕಾರ ಪ್ರೋತ್ಸಾಹ, ಇಲಾಖೆಯ ಮೇಲಾಧಿಕಾರಿಗಳ ನಿರಂತರ ಮಾರ್ಗದರ್ಶನ ನನಗೆ ಇಷ್ಟು ವರ್ಷಗಳವರೆಗೆ ಸೇವೆಯನ್ನು ಸಲ್ಲಿಸಲು ಬಹಳ ಸಹಕಾರವಾಯಿತು ಎಂದರು. ನಮ್ಮ ವೃತ್ತಿಗೆ ನಿವೃತ್ತಿ ಇರಬಹುದು ಆದರೆ ಜೀವನದ ಕೊನೆಯ ಉಸಿರು ಇರುವವರೆಗೂ ನಮ್ಮಿಂದ ಕಲಿತ ವಿದ್ಯಾರ್ಥಿಗಳು ನಮ್ಮನ್ನು ಗುರುಗಳಾಗಿಯೇ ಗೌರವಿಸುತ್ತಾರೆ. ಇದುವೇ ನಿಜವಾದ ಶೈಕ್ಷಣಿಕ ಕ್ಷೇತ್ರದಿಂದ ಸಿಗುವ ಪರಮೋಚ್ಚ ಗೌರವ ಎಂದರು.

ಸುಲೇಮಾನ್ ಶೇಖ ಸ್ವಾಗತಿಸಿದ ಕಾರ್ಯಕ್ರಮಕ್ಕೆ, ಪದ್ಮಾ ಪೂಜಾರಿ ವಂದಿಸಿದರು. ನಾಜಿಯ ಶೇಖ ಕಾರ್ಯಕ್ರಮವನ್ನು ನಿರ್ವಹಿಸಿದರು.

Share This
300x250 AD
300x250 AD
300x250 AD
Back to top